ಹಿಜಾಬ್ ವಿವಾದ : ಪ್ರಕರಣದ ವಿಚಾರಣೆ ಮುಕ್ತಾಯ| ತೀರ್ಪು ಕಾಯ್ದಿರಿಸಿದ ಹೈಕೋರ್ಟ್ ಪೂರ್ಣಪೀಠ
ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು 11 ನೇ ದಿನದ ಹಿಜಾಬ್ ಧರಿಸಲು ಸರಕಾರಿ ಪಿಯು ಕಾಲೇಜಿನ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ಬಾಲಕಿ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆದಿದೆ. ಹಿಜಾಬ್ ಅನುಮತಿ ಕೋರಿದಂತ ವಾದ ಮಂಡನೆ ಇಂದು ಮುಕ್ತಾಯಗೊಂಡಿದೆ.
ಹೈಕೋರ್ಟ್ ತ್ರಿಸದಸ್ಯ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಇಂದು ಮಾತನಾಡಿದ ಪೀಠವು ಎಜಿ ಅವರ ಹೇಳಿಕೆಯಿಂದ ತೃಪ್ತರಾಗಿಲ್ಲ ಎಂದು ಹೇಳಿದೆ. ರಾಜ್ಯಸರಕಾರಕ್ಕೆ ಸಂಬಂಧಿಸಿದಂತೆ ಅದು ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದು ತನ್ನ ಗುರಿಯಲ್ಲ ಎಂದು ಹೇಳಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯಾತೀತತೆ, ಏಕರೂಪತೆ, ಶಿಸ್ತು, ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಪ್ರಜ್ಞೆಯನ್ನು ಕಾಪಾಡುವ ಮತ್ತು ಕಾಳಜಿ ವಹಿಸುತ್ತದೆ ಎಂದು ಹೇಳಿದೆ.
ಈ ಮೂಲಕ ವಾದ ಮುಕ್ತಾಯಗೊಳಿಸಿ ಹೈಕೋರ್ಟ್ ತ್ರಿಸದಸ್ಯ ಪೂರ್ಣಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ.