ವಿಟ್ಲ: ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು!! ಕುಡಿದ ಮತ್ತಿನಲ್ಲಿ ತಂದೆಯಿಂದಲೇ ನಡೆಯಿತು ಮಗನ ಹತ್ಯೆ|ಆರೋಪಿ ತಂದೆ ಪೊಲೀಸರ ವಶಕ್ಕೆ
ಬಂಟ್ವಾಳ : ವ್ಯಕ್ತಿಯೋರ್ವರ ಮೃತದೇಹವೊಂದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಬಿಗ್ ಟ್ವಿಸ್ಟ್ ದೊರಕಿದೆ.
ಮೃತವ್ಯಕ್ತಿ ಕಾಂತಮೂಲೆ ನಿವಾಸಿ ದಿನೇಶ್ ( 45) ಎಂದು ಗುರುತಿಸಲಾಗಿದೆ.
ದಿನೇಶ್ ಹಾಗೂ ಆತನ ತಂದೆ ವಸಂತ ಗೌಡ ಇಬ್ಬರು ಮಾತ್ರ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿದು ಬಂದಿದೆ. ಕೂಲಿ ಕೆಲಸಕ್ಕೆ ಇಬ್ಬರೂ ಹೋಗುತ್ತಿದ್ದು, ಕುಡಿತದ ದಾಸರಾಗಿದ್ದರು. ಹಾಗಾಗಿ ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ತಂದೆಯನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳವಾಗಿದ್ದು, ಸಿಟ್ಟಿಗೆದ್ದ ತಂದೆಯು ಮಗನ ತಲೆಗೆ ಒಡೆದ ಪರಿಣಾಮ ಮಗ ದಿನೇಶ್ ರಕ್ತಸ್ರಾವವಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕಳೆದ ಫೆ.23 ರಂದು ರಾತ್ರಿ ನಮ್ಮಿಬ್ಬರ ಮಧ್ಯೆ ಜಗಳವಾಗಿದ್ದು, ಈ ವೇಳೆ ಕೊಲೆ ನಡೆದಿರುವುದಾಗಿ ವಸಂತಗೌಡ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.