ಹೆಂಡತಿಯ ಸೌಂದರ್ಯದ ಬಗ್ಗೆ ಗಂಡನಿಂದ ಪದೇ ಪದೇ ನಿಂದನೆ ! ಮಕ್ಕಳನ್ನು ಅನಾಥರನ್ನಾಗಿ ಮಾಡಿ ಆತ್ಮಹತ್ಯೆಗೆ ಶರಣಾದ ತಾಯಿ
ಬೆಂಗಳೂರು : ಗಂಡನಿಂದ ಪದೇ ಪದೇ ನಿಂದನೆಗೊಳಗಾದ ಮಹಿಳೆಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.
ಫೆ.18 ರಂದು ಈ ಘಟನೆ ನಡೆದಿದೆ. 33 ವರ್ಷದ ಅನಿಶಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಮದುವೆಯಾಗಿದ್ದ ಅನಿಶಾ ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ದಾರೆ.
ನೀನು ಕುರೂಪಿ, ಸುಂದರವಾಗಿಲ್ಲ ಎಂದು ಪದೇ ಪದೇ ಗಂಡನ ನಿಂದನೆಯಿಂದ ಬೇಸರಗೊಂಡಿದ್ದ ಅನಿಶಾ ಫೆ.18 ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಗಂಡನ ನಿಂದನೆಯ ಬಗ್ಗೆ ಮಹಿಳೆ ತನ್ನ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಈ ವಿಷಯದಿಂದಲೇ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಸಂಬಂಧ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.