ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳದಲ್ಲಿ ಭರ್ಜರಿ ಹೆಚ್ಚಳ! ಯಾರ್ಯಾರಿಗೆ ಎಷ್ಟು ಸಂಬಳ ? ಇಲ್ಲಿದೆ ಫುಲ್ ಡಿಟೇಲ್ಸ್

ಬೆಂಗಳೂರು : ವಿಧಾನಸಭೆಯಲ್ಲಿ ಕರ್ನಾಟಕ ಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ ( ತಿದ್ದುಪಡಿ) ಮಸೂದೆ 2022 ಕ್ಕೆ ಅಂಗೀಕಾರ ಸಿಕ್ಕಿದ್ದು ಇದರಿಂದಾಗಿ ವಿಧಾನಸಭೆ, ವಿಧಾನಪರಿಷತ್ ಎರಡೂ ಸದನಗಳ ಶಾಸಕರ, ಸ್ಪೀಕರ್, ಉಪಸ್ಪೀಕರ್, ಸಭಾಪತಿ, ಉಪಸಭಾಪತಿಗಳ ಸಂಬಳ ಶೇಕಡಾ 50 ರಷ್ಟು ಹೆಚ್ಚಾಗಲಿದೆ. ಜೊತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಸದನದ ಸದಸ್ಯರ ಮನೆ ಬಾಡಿಗೆ, ಪ್ರಯಾಣ ಖರ್ಚುವೆಚ್ಚ ಮತ್ತು ಇತರ ಭತ್ಯೆಗಳ ಸೌಲಭ್ಯವೂ ಹೆಚ್ಚು ಸಿಗಲಿದೆ.

 

ಒಂದೊಂದು ರಾಜ್ಯದಲ್ಲಿ ಶಾಸಕರು, ಸಚಿವರ ಸಂಬಳ ಬೇರೆಯಾಗಿರುತ್ತೆ. ಕರ್ನಾಟಕ ಮುಖ್ಯಮಂತ್ರಿ ಮತ್ತು ಸಚಿವರ ವೇತನಾ ಶೇ.50 ರಷ್ಟು ಹೆಚ್ಚಳವಾಗಿದೆ. ಮುಖ್ಯಮಂತ್ರಿಗಳ ತಿಂಗಳ ವೇತನ 50 ಸಾವಿರ ರೂಪಾಯಿಯಿಂದ ಇದೀಗ 25ಸಾವಿರ ಹೆಚ್ಚಳವಾಗಿದ್ದು ಇನ್ನು ಮುಂದೆ 75 ಸಾವಿರ ರೂಪಾಯಿ ಸಿಗಲಿದೆ.

ಸಂಪುಟ ದರ್ಜೆ ಮಂತ್ರಿಗಳಿಗೂ ತಿಂಗಳಿಗೆ 40 ಸಾವಿರ ರೂ ಇದ್ದ ಸಂಬಳವನ್ನು 60 ಸಾವಿರ ರೂ ಗೆ ಏರಿಸಲಾಗಿದೆ. ವರ್ಷಕ್ಕೆ 3 ಲಕ್ಷವಿದ್ದ ಆತಿಥ್ಯ ಭತ್ಯೆಯನ್ನು ನಾಲ್ಕೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1.20 ಲಕ್ಷ ರೂ ಗೆ ಏರಿಸಲಾಗಿದೆ. 20 ಸಾವಿರ ಇದ್ದ ಮನೆ ನಿರ್ವಹಣೆ ವೆಚ್ಚ 30 ಸಾವಿರ ರೂ ಗೆ ಏರಿಕೆಯಾಗಿದ್ದು, ತಿಂಗಳಿಗೆ 1 ಸಾವಿರ ಲೀಟರ್ ಪೆಟ್ರೋಲ್ ಸೌಲಭ್ಯ ನೀಡಲಾಗಿತ್ತು. ಇದೀಗ ಅದನ್ನು 2 ಸಾವಿರ ಲೀಟರ್ ಗೆ ಏರಿಸಲಾಗಿದೆ.

ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಸಂಬಳದಲ್ಲೂ ಭಾರೀ ಏರಿಕೆಯಾಗಿದ್ದು ತಿಂಗಳಿಗೆ 50 ಸಾವಿರ ಇದ್ದ ಸಂಬಳ 75 ಸಾವಿರಕ್ಕೆ ಏರಿಕೆಯಾಗಿದೆ

ಇಂಧನ ಭತ್ಯೆ : 1000 ಲೀಟರ್ ಪೆಟ್ರೋಲ್ ನಿಂದ 2 ಸಾವಿರ ಲೀಟರ್ ಏರಿಕೆ

ಆತಿಥ್ಯ ವೇತನ ವಾರ್ಷಿಕ : 3 ಲಕ್ಷದಿಂದ 4 ಲಕ್ಷ ರೂ. ಗೆ ಹೆಚ್ಚಳ

ಮನೆ ಬಾಡಿಗೆ : 80 ಸಾವಿರದಿಂದ 1.60 ಲಕ್ಷ ರೂ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋ ಮೀಟರ್ 30 ರೂ.ನಿಂದ 40 ರೂ.ಗೆ ಏರಿಕೆ

ದಿನದ ಭತ್ಯೆ : ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ ಗೆ ಏರಿಕೆ

ಹೊರರಾಜ್ಯ ಪ್ರವಾಸ : ದಿನಕ್ಕೆ 2500+5000 ರೂಪಾಯಿಯಿಂದ 3000+7000 ರೂಪಾಯಿಗೆ ಏರಿಕೆ

ವಿಪಕ್ಷ ನಾಯಕರ ಸಂಬಳದಲ್ಲಿ ಹೆಚ್ಚಳ :

ಸಂಬಳ : ತಿಂಗಳಿಗೆ 40 ಸಾವಿರ ರೂ ನಿಂದ 60 ಸಾವಿರಕ್ಕೆ ಏರಿಕೆ

ಇಂಧನ ಭತ್ಯೆ : 1000 ಲೀಟರ್ ಪೆಟ್ರೋಲ್ ನಿಂದ 2 ಸಾವಿರ ಲೀಟರ್ ಗೆ ಏರಿಕೆ

ಆತಿಥ್ಯ ವೇತನ ವಾರ್ಷಿಕ : 2 ಲಕ್ಷದಿಂದ 2.50 ಲಕ್ಷ ರೂ.ಗೆ ಹೆಚ್ಚಳ

ದಿನದ ಭತ್ಯೆ : ದಿನಕ್ಕೆ 2000 ರೂ ನಿಂದ 3000 ಕ್ಕೆ ಏರಿಕೆ

ಹೊರ ರಾಜ್ಯ ಪ್ರವಾಸ : ದಿನಕ್ಕೆ 5000 ರೂಪಾಯಿಯಿಂದ 7000 ರೂಪಾಯಿಗೆ ಏರಿಕೆ

ಶಾಸಕರ ಭತ್ಯೆ ಹೆಚ್ಚಳ ಮಾಡಿದ ಸರಕಾರ :

ಸಂಬಳ : ತಿಂಗಳಿಗೆ 20 ಸಾವಿರದಿಂದ 40 ಸಾವಿರಕ್ಕೆ ಏರಿಕೆ

ಇಂಧನ ಭತ್ಯೆ : 1000 ಲೀಟರ್ ಪೆಟ್ರೋಲ್ ನಿಂದ 2 ಸಾವಿರ ಲೀಟರ್ ಗೆ ಏರಿಕೆ

ಆತಿಥ್ಯ ವೇತನ ವಾರ್ಷಿಕ : 2 ಲಕ್ಷದಿಂಷ 2.50 ಲಕ್ಷ ರೂ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿ.ಮೀ.ಗೆ 25 ರೂ. ನಿಂದ ರೂ. 30 ಕ್ಕೆ ಏರಿಕೆ

ದಿನದ ಭತ್ಯೆ : ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ

ಹೊರರಾಜ್ಯ ಪ್ರವಾಸ : ದಿನಕ್ಕೆ 5000 ರೂಪಾಯಿಯಿಂದ 7000 ರೂಪಾಯಿಗೆ ಏರಿಕೆ

ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ 20000 ಕಾಯ್ದಿರಿಸಲಾಗಿದೆ. ಆಪ್ತ ಸಹಾಯಕನಿಗೆ ಮತ್ತು ರೂಮ್ ಬಾಯ್ ಸಿಬ್ಬಂದಿಗೆ 10 ಸಾವಿರದಿಂದ 20 ಸಾವಿರ ರೂ ಗೆ ಹೆಚ್ಚಿಸಲಾಗಿದೆ.

Leave A Reply

Your email address will not be published.