ಉಳ್ಳಾಲ : ಸಾಮಾಜಿಕ ಕಾರ್ಯಕರ್ತ ಯಶುಪಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು!

ಉಳ್ಳಾಲ : ಸಾಮಾಜಿಕ ಕಾರ್ಯಕರ್ತ ಯಶುಪಕಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಫೆ‌.22 ಮಂಗಳವಾರದಂದು ನಡೆದಿದೆ.

 

ತಲಪಾಡಿಯ ದೇವಿನಗರ ಸಮೀಪ ಈ ಘಟನೆ ‌ನಡೆದಿದ್ದು ತಲಪಾಡಿ ಗ್ರಾ.ಪಂ.ಸದಸ್ಯ ಶೈಲೇಶ್ ಮತ್ತು ಎಂಟು ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ತೀವ್ರ ಹಲ್ಲೆಗೊಳಗಾದಂತಹ ಪಕಳ‌ ನಾಟೆಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸಿಪಿ ದಿ‌ನಕರ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Leave A Reply

Your email address will not be published.