ಕಾಂಗ್ರೆಸ್ ಶಾಸಕನ ತೋಟದಲ್ಲಿ ಗೋಮಾಂಸ ಮಾರಾಟ| ತೋಟದ ಕಾರ್ಮಿಕನಿಂದ ಕೃತ್ಯ

ಚಿಕ್ಕಮಗಳೂರು : ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡರ ಅವರ ತೋಟದಲ್ಲಿ ಕಾರ್ಮಿಕನಾಗಿ‌ ದುಡಿಯುತ್ತಿದ್ದ ಅಸ್ಸಾಂ ಮೂಲದ ಜಲೀಲ್ ಶೇಖ್ ಎಂಬಾತ ಹಿಂದೂ‌ ಪರ ಸಂಘಟನೆಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

 

ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡರ ತೋಟದಲ್ಲಿ ಕೆಲಸ ಮಾಡುವ ಈತ ಅಕ್ರಮವಾಗಿ ಗೋಮಾಂಸದ ಸಾಗಾಣೆ‌ ಮಾಡುತ್ತಿದ್ದ.

10 ಕೆಜಿ ಗೋಮಾಂಸದೊಂದಿಗೆ ಈತ ಹಿಂದೂ ಸಂಘಟನೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಚಿಕ್ಕಮಗಳೂರಿನಿಂದ ಅಕ್ರಮವಾಗಿ ಗೋ ಮಾಂಸವನ್ನು ತಂದು ಶಾಸಕರ ತೋಟದ ಲೈನ್ ಜನರಿಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಈತ. ಬಾಳೆಹೊನ್ನೂರು ಸಮೀಪದ ಕಣತಿ ಬಳಿ ಈ ಘಟನೆ ನಡೆದಿದೆ.

ಬೈಕ್ ನಲ್ಲಿ ಬಾಸಾಪುರದಿಂದ ತೋಟಕ್ಕೆ ಹೋಗುವ ವೇಳೆ ಈತನನ್ನು ತಡೆಹಿಡಿದು ವಶಕ್ಕೆ ಪಡೆದಿದ್ದಾರೆ. ಈತ ತಾನು ಶಾಸಕ ಟಿ ಡಿ ರಾಜೇಗೌಡರ ತೋಟದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ.

Leave A Reply

Your email address will not be published.