ಕರ್ತವ್ಯದ ನಿಮಿತ್ತ ಹೊರಹೋಗಿದ್ದ ಪತಿ ಮನೆಗೆ ಬರುವಷ್ಟರಲ್ಲೇ ಕಾದಿತ್ತು ಶಾಕ್!! ಪತ್ನಿಯ ಶವ ಕಂಡು ತಾನೂ ಆತ್ಮಹತ್ಯೆಗೆ ಶರಣಾದ ಅರಣ್ಯ ಅಧಿಕಾರಿ

Share the Article

ಕೊಡಗು ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ನವದಂಪತಿಗಳ ಸುಂದರ ಜೀವನ.ಪತಿ ಅರಣ್ಯ ಇಲಾಖೆಯಲ್ಲಿ ಹುದ್ದೆಯಲ್ಲಿದ್ದು ಸಂಜೆ ವೇಳೆ ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಪತ್ನಿಯ ಶವ ಕಂಡು ಬರಸಿಡಿಲೇ ಬಡಿದಂತಾಗಿದೆ.ಬೆಟ್ಟದಷ್ಟು ಕನಸುಗಳನ್ನು ಹೊತ್ತು ದಾಂಪತ್ಯಕ್ಕೆ ಕಾಲಿರಿಸಿದ್ದ ಆ ಜೋಡಿಯು ಇಂದು ಇಹಲೋಕವನ್ನೇ ತ್ಯಜಿಸಿದ್ದು,ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ ದಂಪತಿಗಳ ಸಾವಿಗೆ ನಿಖರ ಕಾರಣ ಇನ್ನೂ ಸಿಗದಂತಾಗಿದೆ.

ಹೌದು, ಇಂತಹದೊಂದು ಘಟನೆ ನೆರೆಯ ಜಿಲ್ಲೆಯಾದ ಕೊಡಗಿನಲ್ಲಿ ನಡೆದಿದ್ದು ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವಜೋಡಿಯು ಆತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನೇ ಕಳೆದುಕೊಂಡಿದೆ.

ಮೃತರನ್ನು ಕೊಡಗಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯಾದ ಯುವರಾಜ್ ಹಾಗೂ ಅವರ ಪತ್ನಿ ಶಿಲ್ಪಾ ಎಂದು ಗುರುತಿಸಲಾಗಿದೆ. ಮೂಲತಃ ಶಿವಮೊಗ್ಗ ನಿವಾಸಿಯಾದ ಯುವರಾಜ್ ಶಿಲ್ಪರನ್ನು ವಿವಾಹವಾಗಿ ಕರ್ತವ್ಯದ ನಿಮಿತ್ತ ಕೊಡಗಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ಎಂದಿನಂತೆ ಘಟನೆ ನಡೆದ ದಿನವೂ ಯುವರಾಜ್ ಕರ್ತವ್ಯಕ್ಕೆ ತೆರಳಿದ್ದು, ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಪತ್ನಿ ಆತ್ಮಹತ್ಯೆ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಬೇಸತ್ತ ಯುವರಾಜ್ ಆಕೆಯ ಕಳೇಬರವನ್ನು ಕೆಳಗಿಳಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಶ್ರೀ ಮಂಗಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

Leave A Reply