ಪಡುಬಿದ್ರಿ: ಈಜಾಡಲು ಸಮುದ್ರಕ್ಕೆ ಇಳಿದ ಮೂವರು ಸ್ನೇಹಿತರು| ಅಲೆಗಳ ಅಬ್ಬರಕ್ಕೆ ಸಿಲುಕಿ ಓರ್ವ ನೀರುಪಾಲು

ಪಡುಬಿದ್ರಿ : ಬೀಚ್ ನಲ್ಲಿ ಈಜಲು ಹೋದ ಮೂವರು ಸ್ನೇಹಿತರು ಸಮುದ್ರದ ಬೃಹತ್ ಅಲೆಗೆ ಸಿಕ್ಕಿ ಮೂವರೂ ಕೂಡಾ ನೀರುಪಾಲಾಗಿದ್ದು, ಅದರಲ್ಲಿ ಇಬ್ಬರನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ.

 

ಈ ಘಟನೆ ಶನಿವಾರ ಸಂಜೆ ಕಾಪು ತಾಲೂಕಿನ ಪಡುಬಿದ್ರಿ ಠಾಣಾ ವ್ಯಾಪ್ತಿಯ ಕಳಿಪಟ್ನ ಎಂಬಲ್ಲಿ ನಡೆದಿದೆ. ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಗಳಾದ ಮೂವರು ಸ್ನೇಹಿತರು ಈಗ ನೀರಿಗೆ ಇಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಮಾಹಿತಿ ತಿಳಿದ ಸ್ಥಳೀಯ ಮೀನುಗಾರರು ಮೂವರಲ್ಲಿ ಇಬ್ಬರನ್ನು ರಕ್ಷಿಸಿದ್ದಾರೆ. ಓರ್ವ ನೀರುಪಾಲಾಗಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Leave A Reply

Your email address will not be published.