ಮಂಗಳೂರು: ದಕ್ಕೆಯ ಮೀನುಗಾರರ ಬಲೆಯಲ್ಲಿ ಸಿಕ್ಕಿ ಹಕ್ಕಿಯಂತೆ ಹಾರಾಡಿದ ಅಪರೂಪದ ಮೀನು!! ಇತರ ಮೀನುಗಳಿಗೆ ಹೋಲಿಸಿದರೆ ಇವುಗಳೇ ಹೆಚ್ಚು ರುಚಿಕರವಂತೆ
ಮಂಗಳೂರು: ಇಲ್ಲಿನ ಮೀನುಗಾರರು ಪ್ರತೀ ಬಾರಿ ಏನಾದರೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಬೃಹತ್ ಗಾತ್ರದ ಮೀನು ಬಲೆಗೆ ಕೆಡವುದರಿಂದ ಹಿಡಿದು ಆಕಸ್ಮಿಕವಾಗಿ ನೀರಿಗೆ ಬಿದ್ದವರನ್ನು ರಕ್ಷಿಸುವ ಕಾರ್ಯಕ್ಕೂ ಸೈ ಎನಿಸಿಕೊಳ್ಳುವಷ್ಟು ಕುಡ್ಲದ ಮೀನುಗಾರರು ಫೇಮಸ್.
ಈಗ ಇನ್ನೊಂದು ವಿಚಾರದಲ್ಲಿ ಮಂಗಳೂರಿನ ದಕ್ಕೆಯ ಹೆಸರು ಕೇಳಿಬಂದಿದ್ದು, ಬೋಟ್ ಮೂಲಕ ಮೀನುಗಾರಿಕೆ ನಡೆಸಿ ದಡ ಸೇರಿರುವ ಮೀನುಗಳ ರಾಶಿಯ ಮಧ್ಯೆ ಹಾರುವ ಮೀನುಗಳೆರಡು ಪತ್ತೆಯಾಗಿ ಸುದ್ದಿಯಾಗಿದೆ.
ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಎಂದು ಕರೆಯಲ್ಪಡುವ ಈ ಹಾರಾಡುವ ಮೀನುಗಳು ಬಲೆಗೆ ಬೀಳುವುದು ಬಲೂಅಪರೂಪ.ಸುಮಾರು 15 ರಿಂದ 45 ಸೆ.ಮೀ ವರೆಗೆ ಉದ್ದವಾಗಿ ಬೆಳೆಯುವ ಈ ಮೀನುಗಳು ಇತರ ಮೀನುಗಳಿಗಿಂತ ತುಂಬಾ ರುಚಿಕರವಂತೆ.
ನೀರಿನಿಂದ ಮೇಲೆ ತಂದ ಬಳಿಕವೂ ಕೆಲ ಹೊತ್ತು ಹಕ್ಕಿಯಂತೆ ಹಾರಾಡುವ ಸಾಮರ್ಥ್ಯವನ್ನು ಹೊಂದಿರುವ ಇವುಗಳು ಒಂಥರಾ ವಿಚಿತ್ರ.ಇವುಗಳನ್ನು ಬಲೆಗೆ ಕೆಡವಲು ಕರಾವಳಿಯ ಎಲ್ಲಾ ಮೀನುಗಾರರ ಪೈಕಿ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಆ ಅನುಭವ ಇರುವುದು ಎಂದು ಮೀನುಗಾರರೇ ತಿಳಿಸಿದ್ದಾರೆ.