ಹಿಜಾಬ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್| ಸೋಮವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿಕೆ

Share the Article

ಬೆಂಗಳೂರು : ಕರ್ನಾಟಕದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದ್ದ ಹಿಜಾಬ್ ವಿವಾದ‌ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ನಿನ್ನೆ ವಿಚಾರಣೆಯನ್ನು ಮಾಡಿದ ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿಯನ್ನು ಇಂದಿಗೆ ಮುಂದೂಡಿತ್ತು.

ಇಂದು ಸರಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡಿಸಿದ್ದಾರೆ.

ಇಂದು ಸರಕಾರದ ಪರ ವಕೀಲ ನಾವದಗಿ ಹೈಕೋರ್ಟ್ ನಲ್ಲಿ ಕೇಸ್ ಮಂಡಿಸಿದ್ದಾರೆ. ಸೋಮವಾರ ಕೂಡಾ ನಾವದಗಿ ಅವರೇ ಕೇಸು ಮಂಡಿಸಲಿದ್ದಾರೆ. ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ‌ 2.30 ಕ್ಕೆ ಮುಂದೂಡಿದೆ.

Leave A Reply