ಸತ್ತ ವಿಷಕಾರಿ ಹಾವುಗಳನ್ನು ಗಬಗಬನೇ ತಿಂದು ಮುಗಿಸುವ ಪುತ್ತೂರಿನ ಪುಳ್ಳಣ್ಣ!! ವಿಶೇಷ ಉರಗ ಪ್ರೇಮಿಯ ನಿಜಬಣ್ಣ ಬಯಲು-ಬೆಚ್ಚಿಬಿದ್ದ ಮನುಕುಲ

ವಿಷ ಜಂತುಗಳನ್ನು-ಕೀಟಗಳನ್ನು ತಿನ್ನುವ ಜನಾಂಗವನ್ನು ಈ ಮೊದಲು ಕಂಡಿದ್ದರೂ ಅದು ಚೀನಾದಂತಹ ದೇಶದಲ್ಲಿ ಮಾತ್ರ. ಆದರೆ ಸದ್ಯ ಭಾರತವೇ ಬೆಚ್ಚಿ ಬೀಳುವಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ವಿಷಕಾರಿ ಹಾವುಗಳನ್ನು ತಿನ್ನುವ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಾನೆ.

 

ಅನಂತಪುರಂ ಜಿಲ್ಲೆಯ ಪುತ್ತೂರು ವಲಯದ ಗ್ರಾಮವೊಂದರ 60 ವರ್ಷದ ಪುಳ್ಳಣ್ಣ ಎಂಬ ಹಾವು ಪ್ರಿಯನೊಬ್ಬ ಸತ್ತ ಹಾವುಗಳನ್ನು ತಿನ್ನುವ ವಿಚಿತ್ರ ಮಾನವ. ರುಚಿಗೆ ಸ್ವಲ್ಪ ಹುಳಿ ಹಿಂಡಿ ಹಾವುಗಳನ್ನು ಗಬಗಬನೇ ತಿನ್ನುವ ಈತನ ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಈ ಮೊದಲು ಈತ ಸತ್ತ ಹಾವುಗಳನ್ನು ಹುಡುಕುತ್ತಿದ್ದ ವಿಷಯ ತಿಳಿದು ಓರ್ವ ಉತ್ತಮ ಹಾವುಪ್ರಿಯ, ಅವುಗಳ ಸಮಾಧಿ ಮಾಡಲು ಹುಡುಕ್ಕಿರಬೇಕು ಎಂದು ಜನ ನಂಬಿದ್ದರು.ಆದರೆ ಕಳೆದ ಮೂರು ದಿನಗಳ ಹಿಂದೆ ಈತನ ನಿಜ ಬಣ್ಣ ಬಯಲಾಗಿದೆ.

ಗ್ರಾಮದಲ್ಲಿ ಸತ್ತ ಹಾವೊಂದರ ವೀಡಿಯೋ ಒಂದನ್ನು ಅಲ್ಲಿನ ಯುವಕರು ಸೆರೆ ಹಿಡಿದಿದ್ದು, ಅದರೊಂದಿಗೆ ಈ ಪುಳ್ಳಣ್ಣ ಹಾವು ತಿನ್ನುವ ವೀಡಿಯೋ ತುಣುಕನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈತನ ನಡೆಗೆ ಮಾನವ ಕುಲವೇ ಬೆಚ್ಚಿ ಬಿದ್ದಿದ್ದು, ನೆಟ್ಟಿಗರಿಂದ ಆಕ್ರೋಶವು ವ್ಯಕ್ತವಾಗಿದೆ.

Leave A Reply

Your email address will not be published.