ಎಸ್ ಬಿಐ ನಿಂದ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರ ಹೆಚ್ಚಳ !!!
ಫೆಬ್ರವರಿ 15, 2022 ಕ್ಕೆ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಮಾತ್ರ ಇದು ಅನ್ವಯಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಎಫ್ ಡಿ ಬಡ್ಡಿದರಗಳು ಇಲ್ಲಿವೆ :
• 2 ವರ್ಷಗಳಿಗಿಂತ ಹೆಚ್ಚು 3 ವರ್ಷಗಳಿಗಿಂತ ಕಡಿಮೆ ವರ್ಷಕ್ಕೆ ಎಫ್ ಡಿ ಇಟ್ಟರೆ ಬಡ್ಡಿದರ 10 ಮೂಲ ಅಂಕಗಳಿಂದ 5.20 ಪ್ರತಿಶತಕ್ಕೆ ಹೆಚ್ಚು ಮಾಡಲಾಗಿದೆ.
• 3 ರಿಂದ 5 ವರ್ಷ ಕ್ಕಿಂತ ಕಡಿಮೆ ಅವಧಿಗೆ ಎಫ್ ಡಿ ಇಟ್ಟರೆ 15 ಬೇಸಿಸ್ ಪಾಯಿಂಟ್ ಗಳಿಂದ 5.45 ಕ್ಕೆ ಹೆಚ್ಚಿಸಲಾಗಿದೆ.
• 5 ರಿಂದ 10 ವರ್ಷಗಳವರೆಗೆ ಎಫ್ ಡಿ ಇಟ್ಟರೆ ಬಡ್ಡಿದರ 10 ಮೂಲ ಅಂಕಗಳಿಂದ 5.50 ಕ್ಕೆ ಹೆಚ್ಚು ಮಾಡಲಾಗಿದೆ.
ಹಾಗೆಯೇ 2 ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ಎಫ್ ಡಿಗಳಿಗೆ ಪರಿಷ್ಕೃತ ದರಗಳು ಅನ್ವಯಿಸುತ್ತದೆ ಎಂದು ಬ್ಯಾಂಕ್ ಹೇಳಿದೆ.
ಆದರೆ ಎಸ್ ಬಿಐ ಅಲ್ಪಾವಧಿಯ ಫಿಕ್ಸೆಡ್ ಡೆಪಾಸಿಟ್ ಗಳ ಎಫ್ ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಅಂದರೆ ಎಸ್ ಬಿಐ 1 ರಿಂದ ಎರಡು ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್ ಡಿ ಮೇಲೆ ಶೇ.5.10 ರಷ್ಟು ಬಡ್ಡಿದರವನ್ನು ನೀಡುತ್ತಿದೆ.
RBI ಹಣಕಾಸು ನೀತಿ ಘೋಷಣೆಯ ಒಂದು ದಿನದ ನಂತರ, SBI ಮತ್ತು UCO ಬ್ಯಾಂಕ್ ಫೆಬ್ರವರಿ 10, 2022 ರಿಂದ 2 ಕೋಟಿಗಿಂತ ಕಡಿಮೆ ಮೊತ್ತದ ಫಿಕ್ಸೆಡ್ ಡೆಪಾಸಿಟ್ ( FD) ಪರಿಷ್ಕರಿಸಿದ್ದವು.
RBI ಫೆ.10 2022 ರಂದು ತನ್ನ ದ್ವೈ ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ಮತ್ತು ರಿವರ್ಸ್ ರೆಪೋ ದರಗಳನ್ನು ಬದಲಾವಣೆ ಮಾಡಬಾರದು ಎಂದು ನಿರ್ಧರಿಸಿದೆ.
ಅಲ್ಲದೆ ಹಿರಿಯ ನಾಗರಿಕರು ಎಲ್ಲಾ ಎಫ್ ಡಿ ಹೂಡಿಕೆಗಳ ಮೇಲೆ 50 ಬೇಸಿಸ್ ಪಾಯಿಂಟ್ ಗಳ ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಇತ್ತೀಚೆಗೆ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕ್ರಮವಾಗಿ ಶೇ.4 ಮತ್ತು ಶೇ 3.35 ರಲ್ಲೇ ಇರಿಸಲು ನಿರ್ಧರಿಸಿದ ನಂತರ ಎಸ್ ಬಿಐ ನಿಂದ ಎಫ್ ಡಿ ಬಡ್ಡಿದರಗಳ ಪರಿಷ್ಕರಣೆಯ ಘೋಷಣೆ ಬಂದಿದೆ.