ಬೆಳ್ತಂಗಡಿ : ಉಜಿರೆಯ ಮಕ್ಕಳ ತಜ್ಞ ವೈದ್ಯ ಡಾ.ಶಂತನು ಆರ್ ಪ್ರಭು ಅವರ ಟ್ವಿಟ್ಟರ್ ಖಾತೆ ಹ್ಯಾಕ್| ಕಿಡಿಗೇಡಿಗಳಿಂದ ಹಿಜಾಬ್ ಕುರಿತು ಅವಹೇಳನಕಾರಿ ಪೋಸ್ಟ್|
ಬೆಳ್ತಂಗಡಿ : ಉಜಿರೆಯ ಹೆಸರಾಂತ ಬೆನಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಶಾಂತನು ಆರ್ ಪ್ರಭು ಅವರ ಟ್ವಿಟ್ಟರ್ ಖಾತೆಯನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡ ಹಿಜಾಬ್ ವಿರುದ್ಧ ಟ್ವೀಟ್ ಮಾಡಿದ್ದಾರೆ.
ಈ ಘಟನೆ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಟ್ವಿಟ್ಟರ್ ನಲ್ಲಿ ಹಿಜಾಬ್ ಬಗ್ಗೆ ಇಲ್ಲಸಲ್ಲದ ಮೆಸೇಜ್ ಹಾಕಲಾಗಿದೆ. ಹಿಜಾಬ್ ಧರಿಸಲು ಇದು ತಾಲಿಬಾನ್ ಅಥವಾ ಸೌದಿ ಅರೇಬಿಯಾ ಅಲ್ಲ. ಮದರಸವೂ ಅಲ್ಲ. ಇದು ಶಿಕ್ಷಣ ಸಂಸ್ಥೆ. ಮದರಸದಲ್ಲಿ ಬೇಕಾದರೆ ಹಿಜಾಬ್ ಹಾಕಿ ಎಂಬಿತ್ಯಾದಿಯಾಗಿ ಸಂದೇಶ ರವಾನಿಸಿದ್ದಾರೆ.
ಯೆನಪೋಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿ ನಂತರ ಮಕ್ಕಳ ತಜ್ಞ ವಿಭಾಗದಲ್ಲಿ ಅಧ್ಯಯನ ನಡೆಸಿ ಪ್ರಸ್ತುತ ಒಂದು ವರ್ಷದಿಂದ ಮುಂಡಾಜೆಯಲ್ಲಿ ಶಂತನು ಪ್ರಭು ಅವರ ತಂದೆ ಹಿರಿಯ ವೈದ್ಯ ಡಾ.ರವೀಂದ್ರನಾಥ ಪ್ರಭು ಅವರ ಕ್ಲಿನಿಕ್ ನಲ್ಲಿ ಮತ್ತು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ಯಾರೋ ಕಿಡಿಗೇಡಿಗಳು ಅವರ ಖಾತೆಯನ್ನು ಹ್ಯಾಕ್ ಮಾಡಿ ಬೆನಕ ಆಸ್ಪತ್ರೆಯ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಬೆನಸ ಆಸ್ಪತ್ರೆ ಭೇಟಿ ನೀಡಬೇಡಿ, ಮುಸ್ಲಿ ವಿರೋಧಿ ಮನಸ್ಥಿತಿ ಇರುವ ಮಕ್ಕಳ ವೈದ್ಯನ ಕೈಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಡಿ ಎಂಬುದಾಗಿ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಂತನು ಅವರು ನನಗೆ ಹಿಜಾಬ್ ಬಗ್ಗೆ ಗೊತ್ತಿದೆ. ಮುಸ್ಲಿಮರ ರೀತಿ ನೀತಿ ಗೊತ್ತಿದೆ. ನನಗೆ ಹಲವು ಮಂದಿ ಮುಸ್ಲಿಂ ಸ್ನೇಹಿತರಿದ್ದಾರೆ. ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ ಯಾರೋ ನನ್ನ ತೇಜೋವಧೆಗೆ ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.