ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ ಅಜ್ಜಿ

Share the Article

ಮನೆಗೆ ಕಳ್ಳತನ ಮಾಡಲು ಬಂದವರು ಮನೆಯಲ್ಲಿದ್ದ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಮಾಡಿ ಹೋಗಿದ್ದಾರೆ.

ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ನಡೆದಿದೆ.

ದೆಹಲಿಯ ತಿಲಕ್ ನಗರದಲ್ಲಿ ಈ ಘಟನೆ ನಡೆದಿದೆ. ತಿಲಕ್ ನಗರದ ಮನೆಯೊಂದರ ಮೊಬೈಲ್ ಫೋನ್ ಕಳ್ಳತನದ ಬಗ್ಗೆ ವೃದ್ಧೆಯ ಮಗಳು ಫೆ.13 ರಂದು ಪೊಲೀಸರಿಗೆ ದೂರು ನೀಡಲು ಹೋದಾಗ ಈ ವಿಚಾರ ಹೇಳಿದ್ದಾರೆ.

ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಮನೆಯಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಇತ್ತ ಕಡೆ ಅತ್ಯಾಚಾರಕ್ಕೊಳಗಾದ ವೃದ್ಧೆ ತೀವ್ರ ಆಘಾತಕ್ಕೊಳಗಾಗಿದ್ದು, ಕೌನ್ಸಿಲಿಂಗ್ ನೀಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಪೊಲೀಸ್ ಅತ್ಯಾಚಾರ ಆರೋಪಿಯನ್ನು ಘಟನೆ ನಡೆದ 16 ಗಂಟೆಯೊಳಗಾಗಿ ಬಂಧಿಸಲಾಗಿದೆ. ಈತ ಅದೇ ಏರಿಯಾದವನು. 30 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply