ದಿನಗೂಲಿ ನೌಕರನ ಸೂಪರ್ ಗ್ಲ್ಯಾಮ್ ಮೇಕ್ ಓವರ್ ಲುಕ್| ಸೂಪರ್ ಮಾಡೆಲ್ ಗಿಂತ ಕಮ್ಮಿ ಇಲ್ಲ ಈ ಸ್ಟೈಲಿಶ್ ಲುಕ್ | ಹೇಗಿದ್ದ ಹೇಗಾದ ಗೊತ್ತಾ ?

ಈ ವ್ಯಕ್ತಿ ದಿನಗೂಲಿ ಕಾರ್ಮಿಕ. ಬೆಳಗ್ಗೆ ಕೆಲಸಕ್ಕೆ ಹಾಗೂ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆ ಪರಿಸರದ ಜನ ಇವರನ್ನು ನೋಡಿಯೇ ಇರುತ್ತಾರೆ. ಆದರೆ ಈಗ ವಿಷಯ ಏನೆಂದರೆ ಮುಸುಕು ಮುಸುಕಾದ ಬಟ್ಟೆ ಲುಂಗಿ ಧರಿಸಿ ಹೋಗುತ್ತಿದ್ದ ಇವರ ಲುಕ್ ಈಗ ಸಂಪೂರ್ಣ ಬದಲಾಗಿದೆ.

ಈ ಸೂಪರ್ ಗ್ಲ್ಯಾಮರ್ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ.

ಇದು ಕೇರಳದ ದಿನಗೂಲಿ ಕೆಲಸಗಾರ. ಇವರ ಹೆಸರು ಮಮ್ಮಿಕಾ. ಸುಮಾರು 60 ವರ್ಷ ಇವರಿಗೆ. ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್ ನಲ್ಲಿ ಸೂಟ್ ಧರಿಸಿ ಐಪ್ಯಾಡ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದರು. ಈ ಲುಕ್ ಈಗ ನೆಟ್ಟಿಗರ ಗಮನ ಸೆಳೆದಿದೆ.

ಮಮ್ಮಿಕಾ ಅವರ ಈ ಗ್ಲಾಮರ್ ಲುಕ್ ನ ಹಿಂದೆ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅವರ ಶ್ರಮ ತುಂಬಾ ಇದೆ. ಅದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.

https://www.instagram.com/reel/CZhImpwFPk1/?utm_source=ig_web_copy_link

Leave A Reply

Your email address will not be published.