ಆಟೋ ಚಾಲಕರೇ ಇತ್ತ ಗಮನಿಸಿ| ಸಾರಿಗೆ ಇಲಾಖೆಯಿಂದ ಬಿಗ್ ಶಾಕ್| ಅರ್ಹತಾ ಪ್ರಮಾಣ ಪತ್ರ( FC) ಮಾರ್ಚ್ 31 ಕ್ಕೆ ಮುಕ್ತಾಯ

Share the Article

ಬೆಂಗಳೂರು : ಆಟೋ‌ ಚಾಲಕರಿಗೆ ಸಾರಿಗೆ‌ ಇಲಾಖೆ ಬಿಗ್ ಶಾಕ್ ನೀಡಿದ್ದು, ಎಫ್ ಸಿ ( ಅರ್ಹತಾ ಪತ್ರ) ಅವಧಿಯ ಸಮಯವನ್ನು ಮಾರ್ಚ್ 31 ಕ್ಕೆ ಮುಕ್ತಾಯಗೊಳಿಸುವುದಾಗಿ‌ ಹೇಳಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಟು- ಸ್ಟ್ರೋಕ್ ಆಟೋಗಳ ಅರ್ಹತಾ ಪ್ರಮಾಣ ಪತ್ರ ( FCl ) ಅವಧಿ ಮುಕ್ತಾಯಗೊಳಿಸುವುದಾಗಿ ಸಾರಿಗೆ ಇಲಾಖೆ ಹೇಳಿದೆ.

ಟುಸ್ಟ್ರೋಕ್ ಆಟೋಗಳು ನವೀಕರಿಸಲಾಗದ ಪೆಟ್ರೋಲ್ ಬಳಸುವುದರಿಂದ ಹಾಗೂ ಅವುಗಳ ಕಾರ್ಯಕ್ಷಮತೆ ಕ್ಷೀಣಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ.

2020 ಜೂ.10 ರಂದು ಕೊರೊನಾ ಸೋಂಕಿನ ಕಾಣದಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಸಂಘಟನೆಗಳ ಸಭೆ ನಡೆಸಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡಿತ್ತು. 2022 ಮಾರ್ಚ್ 31 ಕ್ಕೆ ಆಟೋಗಳ ಅರ್ಹತಾ ಪತ್ರ ಮುಕ್ತಾಯವಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಇತ್ತೀಚಿನ ಬಿ ಎಸ್ ಸರಣಿ ಮತ್ತು ಭಾರತ್ ಸರಣಿಯ ಮಾನದಂಡಕ್ಕಿಂತ ಹೆಚ್ಚು ಹೊಗೆ ಬಿಡುತ್ತದೆ ಎಂಬ ಕಾರಣಕ್ಕೆ 2017 ರಲ್ಲೇ ನಿಷೇಧದ ಆದೇಶ ಹೊರಡಿಸಿತ್ತು.

Leave A Reply