ಇಪ್ಪತ್ತು ಬಸ್ ಗಳ ಮಾಲೀಕನಿಗೆ ಬಸ್ ಮಾರುವ ಸಂಕಷ್ಟ| ಕೇಜಿಗೆ 45 ರೂ.ಗೆ ಬಸ್ ಗಳನ್ನು ಮಾರಾಟಕ್ಕಿಟ್ಟ ಒಡೆಯ
ಬಸ್ ಮಾಲೀಕರೊಬ್ಬರು ಕೊರೊನಾ ಲಾಕ್ಡೌನ್ ನಿಂದ ತೀವ್ರ ಸಂಕಷ್ಟಕ್ಕೊಳಗಾಗಿ ತಮ್ಮಬಸ್ ಗಳನ್ನು ರೂ. 45 ರಂತೆ ಗುಜರಿ ಬೆಲೆಗೆ ಮಾರಾಟಕ್ಕಿಟ್ಟು ಸುದ್ದಿಯಾಗಿದ್ದಾರೆ.
ಕೊಚ್ಚಿಯಲ್ಲಿ ರಾಯಲ್ ಟ್ರಾವೆಲ್ಸ್ ಹೆಸರಿನಲ್ಲಿ ಟೂರಿಸ್ಟ್ ವಾಹನಗಳನ್ನು ನಡೆಸುತ್ತಿದ್ದ ರಾಯನ್ಸ್ ಜೋಸೆಫ್ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸತತವಾಗಿ ಎರಡು ವರ್ಷಗಳ ಸತತ ಲಾಕ್ಡೌನ್ ನಿಂದ ಬೇಸತ್ತಿರುವ ಮಾಲೀಕ ವ್ಯಾಪಾರವಿಲ್ಲದೆ ತನ್ನ ಬಸ್ ಗಳನ್ನು ಗುಜರಿ ಮಾರಾಟಕ್ಕೆ ಮುಂದಾಗಿದ್ದಾರೆ.
ಕೊರೊನಾ ಈಗ ಸ್ವಲ್ಪ ಕಡಿಮೆಯಾದರೂ ಜನ ಬಾಡಿಗೆ ವಾಹನಗಳತ್ತ ಮುಖಮಾಡಿಲ್ಲ. ಸ್ವಂತ ವಾಹನದಲ್ಲೇ ಹೆಚ್ಚಿನವರು ತೆರಳುತ್ತಿದ್ದಾರೆ. ಹಾಗಾಗಿ ಈ ಟೂರಿಸ್ಟ್ ಬಿಸ್ ನೆಸ್ ಮುಂದುವರಿಸಲು ಸಾಧ್ಯವಿಲ್ಲ.
ಇಪ್ಪತ್ತು ಬಸ್ ಗಳನ್ನು ಈಗಾಗಲೇ ಮಾರಾಟ ಮಾಡಿದ್ದೇನೆ. ಉಳಿದಿರುವುಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದ್ದೇನೆ. ನನ್ನ ಕುಟುಂಬ ಬದುಕಲು ಇದೇ ಒಂದು ಮಾರ್ಗ. ನೌಕರರು ಕೂಡಾ ಸಂಕಷ್ಟದಲ್ಲಿದ್ದಾರೆ ಎಂದು ರಾಯನ್ಸ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಕೋವಳಂ ಟೂರಿಗೆ ಹೋಗಿದ್ದ ಬಸ್ಸನ್ನು ಪೊಲೀಸರು ನಿಲ್ಲಿಸಿ 4000 ದಂಡ ಹಾಕಿದ್ದರು. ವರ್ಷಕ್ಕೆ ಹಲವು ತೆರಿಗೆ ಪಾವತಿ ಮಾಡಬೇಕು. ಪ್ರತೀ ವರ್ಷ ಪ್ರತೀ ಬಸ್ ಮೇಲೆ 40000 ರೋಡ್ ಟ್ಯಾಕ್ಸ್ ಕಟ್ಟಬೇಕು. ಬಿಸಿನೆಸ್ ಇಲ್ಲದೆ ಇದನ್ನೆಲ್ಲ ಮಾಡುವುದು ಕಷ್ಟ ಎಂದು ಹೇಳುತ್ತಾರೆ ರಾಯ್ಸನ್