ಕೆಲಸ ಮಾಡುವಾಗ ಬೋರ್ ಆಯಿತೆಂದು ಈತ ಮಾಡಿದ್ದೇನು ಗೊತ್ತಾ ??| ಕೆಲಸ ಕಳೆದುಕೊಂಡರೂ ಕೂಡ ಆತ ಮಾಡಿದ ಸಾಧನೆ ಮಾತ್ರ ಅಂತಿಂಥದ್ದಲ್ಲ !!
ಈಗಿನ ಕಾಲನೇ ಹಾಗೆ ಯಾರು ತಾನೇ ಸುಮ್ಮನೆ ಕೂರಬಲ್ಲ. ಒಮ್ಮೆಗೆ ಕೂತಲ್ಲೇ ಕೆಲಸ ಮಾಡೋ ಉದ್ಯೋಗ ಸಿಗಲೆಂದು ಅಂದುಕೊಂಡರು ಸ್ವಲ್ಪ ದಿನ ಕಳೆದ ಬಳಿಕ ಅದು ಕೂಡ ಬೋರ್ ಅನಿಸಿ ಬಿಡುತ್ತೆ.ಸಪ್ಪಗೆ ಕೂರುವಾಗ ಏನಾದರೊಂದು ಕೈಯಲ್ಲಿ ಕಿತಾಪತಿ ಮಾಡುತ್ತಲೇ ಇರುತ್ತೀವಿ. ಅದೇ ತರ ಇಲ್ಲೊಬ್ಬ ವಾಚ್ ಮ್ಯಾನ್ ಕೂತು ಕೂತು ಸುಸ್ತಾಗಿ ಏನು ಮಾಡಿದ್ದಾನೆ ಗೊತ್ತಾ? ಅದು ಕೂಡ ಆತನ ಕೆಲಸ ಕಳೆದುಕೊಳ್ಳುವಂತಹ ಕೆಲಸ!!
ಹೌದು.ಕೆಲಸ ಮಾಡುವಾಗ ಬೋರ್ ಆಯಿತೆಂದು ಸೆಕ್ಯುರಿಟಿ ಗಾರ್ಡ್‌ವೊಬ್ಬರು ಮಾಡಿದ ಕೆಲಸ ಇದೀಗ ವಿಶ್ವದಲ್ಲೇ ಸುದ್ದಿಯಲ್ಲಿದೆ.ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ!?ಆತ ಮಾಡಿದ್ದು ಬೇರೇನೂ ಅಲ್ಲ, ನಾಲ್ಕು ಕಣ್ಣು ಬರೆದಿದ್ದಷ್ಟೇ!ಇದೇನು ಕಣ್ಣು ಬರೆದಿದ್ದಕ್ಕೆ ಕೆಲಸನೇ ಹೋಯ್ತಾ ಅನ್ಕೊಂಡ್ರಾ.. ಯಾಕಂದ್ರೆ ಅವನು ಬಿಡಿಸಿದ ಕಣ್ಣು ಅಂತಿಂತಹ ಚಿತ್ರದಲ್ಲಿ ಅಲ್ಲ.7 ಕೊಟಿಯದ್ದು!
ರಷ್ಯಾದಲ್ಲಿ ಇತ್ತೀಚೆಗೆ ನಡೆದ ಚಿತ್ರಕಲಾ ಪ್ರದರ್ಶನದ ವೇಳೆ 60 ವರ್ಷ ವಯಸ್ಸಿನ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.ಅಲ್ಲಿದ್ದ 3 ಮನುಷ್ಯರ ಕಲಾಕೃತಿಯಲ್ಲಿ ಕಣ್ಣು, ಮೂಗು ಏನೂ ಇಲ್ಲದಿರುವುದನ್ನು ಕಂಡು ಕೂತಲ್ಲಿಯೇ ತಮ್ಮ ಜೇಬಿನಿಂದ ಬಾಲ್ ಪಾಯಿಂಟ್ ಪೆನ್ ತೆಗೆದುಕೊಂಡು ತಾವೇ ಎರಡು ಮನುಷ್ಯರ ಚಿತ್ರಕ್ಕೆ ಪೆನ್ನಿನಲ್ಲಿ ಕಣ್ಣುಗಳನ್ನು ಬರೆದಿದ್ದರು.ಆದರೆ ಇದು ಕೇಳಲು ತುಂಬಾನೇ ಸಾಮಾನ್ಯ ವಿಷಯ ಎಂದೆನಿಸಬಹುದು, ಆದರೆ ಇಲ್ಲಿ ಒಂದು ದೊಡ್ಡ ವಿಷಯವಿದೆ. ಈ ಪೇಂಟಿಂಗ್ ಬೆಲೆ ಬರೋಬ್ಬರಿ 1 ಮಿಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಇದರ ಬೆಲೆ 7.47 ಕೋಟಿ ರೂಪಾಯಿ ಆಗಿದ್ದು, ಭದ್ರತಾ ಸಿಬ್ಬಂದಿ ಈ ಪೇಂಟಿಂಗ್ ಅನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆ ಕಲಾಕೃತಿಗಳು ಪೇಂಟಿಂಗ್ ಅಂತೂ ಅಲ್ಲವೇ ಅಲ್ಲ, ಇದು ಟ್ರೆಟ್ಯಾಕೊವ್ ಗ್ಯಾಲರಿ ಸಂಗ್ರಹದಿಂದ “ತ್ರಿ ಫಿಗರ್’ ಥೀಮ್‌ನ ಅನ್ನಾ ಲಿಪೊರ್ಸ್ಸ್ಕಾಯ ಬರೆದಿದ್ದದ್ದಾಗಿದ್ದು, ಮಾಸ್ಕೋದಿಂದ ಬಾಡಿಗೆಗೆ ತರಲಾಗಿತ್ತು. ವರ್ಣಚಿತ್ರವನ್ನು ಡಿಸೆಂಬರ್ 7, 2021 ರಂದು ‘ದಿ ವರ್ಲ್ಡ್ ಆಸ್ ನಾನ್-ಆಬ್ಜೆಕ್ಟಿವಿಟಿ, ದಿ ಬರ್ತ್ ಆಫ್ ಎ ನ್ಯೂ ಆರ್ಟ್’ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.ಈಗ ಕಲಾಕೃತಿಯನ್ನು ಹಾಳುಮಾಡಿದ ಆರೋಪದಲ್ಲಿ ಆ ಖಾಸಗಿ ಕಂಪನಿಯ ಈ 60 ವರ್ಷದ ಸೆಕ್ಯುರಿಟಿ ಗಾರ್ಡ್ ಅನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಘಟನೆ ಬೆಳಕಿಗೆ ಬಂದ ನಂತರ, ಪೊಲೀಸರು ಈ ಪೇಂಟಿಂಗ್‌ನಲ್ಲಿ ಯಾರು ಕಣ್ಣುಗಳನ್ನು ಬಿಡಿಸಿದ್ದಾರೆ ಎಂದು ತನಿಖೆಯನ್ನು ಪ್ರಾರಂಭಿಸಿದರು, ಈ ತಪ್ಪಿಗೆ ಶಿಕ್ಷೆ 39,900 ರೂಪಾಯಿ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಈ ಪೇಂಟಿಂಗ್ ಅನ್ನು ಹಾನಿ ಮಾಡಿದ್ದಕ್ಕಾಗಿ ಒಟ್ಟು 2,49,500 ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಜ್ಞರು ಚಿತ್ರಕಲೆಯನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಪ್ರಯತ್ನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಯೆಲ್ಟ್ಸಿನ್ ಸೆಂಟರ್ ನ ಸಿಬ್ಬಂದಿಗಳು ಹೇಳಿದ್ದಾರೆ. “ಮರುದಿನವೇ ಸ್ಟೇಟ್ ಟ್ರೆಟ್ಯಾಕೊವ್ ಗ್ಯಾಲರಿಯವರು ಈ ಕೆಲಸವನ್ನು ಪರಿಶೀಲಿಸಿದರು ಮತ್ತು ಮಾಸ್ಕೋಗೆ ಈ ಪೇಂಟಿಂಗ್ ಅನ್ನು ಕಳುಹಿಸಿದರು. ಚಿತ್ರಕಲೆಯನ್ನು ಪುನಃ ಮೊದಲಿನಂತೆ ಮಾಡಲಾಗುತ್ತಿದ್ದು, ತಜ್ಞರ ಪ್ರಕಾರ ಆ ಪೆನ್‌ನಿಂದ ಮಾಡಿದ ಕಣ್ಣುಗಳನ್ನು ಮೂಲ ಪೇಂಟಿಂಗ್‌ಗೆ ಯಾವುದೇ ರೀತಿಯ ಹಾನಿ ಆಗದಂತೆ ತೆಗೆದು ಹಾಕಬಹುದು ಎಂದಿದ್ದಾರೆ.