ವಿದ್ಯಾರ್ಥಿಗಳೇ ಗಮನಿಸಿ| ಈ ಬಾರಿ ಬೇಸಿಗೆ ರಜೆಗೆ ಬೀಳಲಿದೆ ಕತ್ತರಿ
ಬೆಂಗಳೂರು : ರಾಜ್ಯದ ಶಾಲೆ ಬೇಸಿಗೆ ರಜೆಯನ್ನು ಈ ಬಾರಿ 15 ದಿನಗಳ ಕಾಲ ಕಡಿತಗೊಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಇದಾಗಿದೆ.
ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿ ಕೂಡಾ ಶಾಲೆಗಳು ತುಂಬಾ ತಿಂಗಳುಗಳ ಕಾಲ ಮುಚ್ಚಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗಿತ್ತು.
ಈ ಕಾರಣದಿಂದ ಮುಂದಿನ ಶೈಕ್ಷಣಿಕ ವರ್ಷವನ್ನು 15 ದಿನ ಮೊದಲು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈಗ ಶಾಲೆಯ ವೇಳಾಪಟ್ಟಿ ಪ್ರಕಾರ ಎಪ್ರಿಲ್ 29 ರಂದು ಬೇಸಿಗೆ ರಜೆ ಆರಂಭವಾಗಿ ಮೇ 30 ಕ್ಕೆ ಕೊನೆಗೊಳ್ಳಲಿದೆ. ಆದರೆ ಈ ಪರಿಷ್ಕೃತ ಯೋಜನೆಯ ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 15 ಕ್ಕೆ ಆರಂಭವಾಗಲಿದೆ.
ಕಲಿಕಾ ನಷ್ಟ ಮತ್ತು ಕಲಿಕಾ ಅಂತರ ದೊಡ್ಡದಾಗಿದೆ. ಇವುಗಳನ್ನು 15 ದಿನಗಳ ಅವಧಿಯಲ್ಲಿ ನಾವು ಗಳಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಗಣಿತ, ಇತಿಹಾಸ ಹಾಗೂ ವ್ಯಾಕರಣಗಳ ನಷ್ಟವನ್ನು ತುಂಬಬೇಕಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.