ಕೋಳಿ ಕಾಳಗ : ಹುಂಜದ ಕಾಲಿಗೆ ಕಟ್ಟಿದ್ದ ಚಾಕು ಚುಚ್ಚಿ ವ್ಯಕ್ತಿ ಸಾವು| ಕಾಲಿನ ನರಕ್ಕೆ ಪೆಟ್ಟು ಬಿದ್ದು ಮೃತ್ಯು| ಪೊಲೀಸರಿಂದ 12 ಮಂದಿಯ ಬಂಧನ
ಕೋಳಿ ಕಾಳಗ ಅಂದರೆ ಎಲ್ಲರಿಗೂ ಗೊತ್ತು. ಕೋಳಿಗಳನ್ನು ಚೆನ್ನಾಗಿ ಪಳಗಿಸಿ ಈ ಕಾಳಗಕ್ಕೆ ಎಂದೇ ತಯಾರು ಮಾಡುತ್ತಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಜನರು ಕೋಳಿ ಕಾಳಗವನ್ನು ಒಂದು ಪ್ರತಿಷ್ಠೆಯ ಪ್ರತೀಕ ಎಂಬಂತೆ ತುಂಬಾನೇ ಗಂಭೀರವಾಗಿ ಪರಿಗಣಿಸುತ್ತಾರೆ. ಇದರಿಂದ ಅನೇಕ ಜಗಳಗಳಾಗುವುದನ್ನು ಕೂಡಾ ನಾವು ಗಮನಿಸಿದ್ದೇವೆ ಕೂಡಾ.
ಹುಂಜಗಳ ಕಾಲಿಗೆ ಬ್ಲೇಡ್ ಅಥವಾ ಹರಿತವಾದ ಚಾಕುಗಳನ್ನು ಕಟ್ಟಬಾರದು ಎಂಬ ಆದೇಶವಿದ್ದರೂ ಸಹ ಈ ಕ್ರೀಡೆಯನ್ನು ಅನೇಕ ಕಡೆಗಳಲ್ಲಿ ಆಡಿಸುತ್ತಾರೆ.
ಈ ಕೋಳಿಗಳ ಕಾಳಗದಲ್ಲಿ ಕೋಳಿಗಳ ರಕ್ತ ಹರಿಯುವುದಲ್ಲದೇ ಕೆಲವೊಮ್ಮೆ ಅಚಾತುರ್ಯದಿಂದ ವ್ಯಕ್ತಿಗಳ ರಕ್ತವು ಸಹ ಹರಿಯುತ್ತದೆ.
37 ವರ್ಷದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೋಳಿ ಕಾಲಿಗೆ ಕಟ್ಟಿದ್ದ ಚಾಕು ತನ್ನ ಕಾಲಿಗೆ ಚುಚ್ಚಿ ಕಾಲಿನಲ್ಲಿರುವ ನರಕ್ಕೆ ತೀವ್ರವಾಗಿ ಗಾಯವಾದ ನಂತರ ಮೃತಪಟ್ಟಿದ್ದಾಗಿ ವರದಿಯಾಗಿದೆ. ಪೊಲೀಸರು ಮೃತ ವ್ಯಕ್ತಿಯನ್ನು ಚಿತ್ತೂರು ಜಿಲಯ ಪೆದ್ದಮಾಂಡಯಂ ಮಂಡಲದ ಮುದಿವೇಡುವಿನಿಂದ ಗಂಗೂಲಿಯಾ ಎಂಬುದಾಗಿ ಗುರುತಿಸಲಾಗಿದೆ.
ಗಂಗೂಲಿಯಾ ಚಾಕುವಿನಿಂದ ಆದ ಗಾಯದಿಂದ ಬಳಲುತ್ತಿದ್ದು, ದೇಹದಿಂದ ತುಂಬಾನೇ ರಕ್ತ ಹೋಗಿ ಸಾವಾಗಿದೆ ಎಂದು ಹೇಳಲಾಗುತ್ತಿದೆ.
ಆತನನ್ನು 108 ಆಂಬ್ಯುಲೆನ್ಸ್ ನಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರೂ ಅತಿಯಾದ ರಕ್ತಸ್ರಾವದಿಂದ ಕಾಲಿನ ನರಗಳ ಕಡಿತಗೊಂಡಿರುವುದರಿಂದ ಸಾವು ಸಂಭವಿಸಿದೆ ಎಂದು ಪೆದ್ದಮಾಂಡಯಂ ಸಬ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಈ ಕೋಳಿ ಜಗಳ ಕ್ರೀಡೆಯನ್ನು ಸಂಘಟಿಸಿದ್ದಕ್ಕಾಗಿ ಪೊಲೀಸರು 12 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಐದು ಕೋಳಿಗಳನ್ನು ಕೂಡಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.