ಮದುವೆ ಮನೆಯಲ್ಲಿ ನಾಡ ಬಾಂಬ್ ದಾಳಿ-ಓರ್ವ ಸಾವು!!

Share the Article

ಕಾಸರಗೋಡು:ಮದುವೆಯ ಮುನ್ನ ದಿನ ನಡೆದ ವಿವಾದಕ್ಕೆ ಪ್ರತೀಕಾರವಾಗಿ ಮದುವೆಯ ದಿನ ನಡೆದ ನಾಡ ಬಾಂಬ್ ದಾಳಿಯಲ್ಲಿ ಓರ್ವ ಮೃತಪಟ್ಟ, ಮತ್ತೊರ್ವ ಗಾಯಗೊಂಡ ಘಟನೆ ಕೇರಳದ ಕಣ್ಣೂರಿನ ತೊಟ್ಟಡ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಮೃತರನ್ನು ಏಚೂರು ನಿವಾಸಿ ಜಿಶ್ಣು ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಯ ಹಿಂದಿನ ದಿನ ಎರಡು ಗುಂಪುಗಳ ನಡುವೆ ಮದುವೆ ಮನೆಯಲ್ಲೇ ಭಿನ್ನಾಭಿಪ್ರಾಯ ಮೂಡಿದ್ದು ಮಾತಿನ ಚಕಮಕಿಯೂ ನಡೆದಿತ್ತು. ಆ ಬಳಿಕ ರಾಜಿ ಯಲ್ಲಿ ಪ್ರಕರಣ ಸುಖಾಂತ್ಯ ಕಂಡಿತ್ತು. ಆದರೆ ಮದುವೆಯ ದಿನ ಒಂದು ಗುಂಪು ಬಾಂಬ್ ಎಸೆದಿದ್ದು, ಈ ಸಂದರ್ಭ ಓರ್ವ ಮೃತಪಟ್ಟಿದ್ದಾನೆ.

Leave A Reply