ಸಯ್ಯದ್ ಮದನಿ ದರ್ಗಾ ಉರೂಸ್ ಕಾರ್ಯಕ್ರಮ| ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಪ್ರವೇಶ ನಿರ್ಬಂಧ| 25 ದಿನಗಳ ಕಾಲ ನಿರ್ಬಂಧ ವಿಧಿಸಿದ ದ.ಕ.ಡಿಸಿ|
ಮಂಗಳೂರು : ಉಳ್ಳಾಲದ ಇತಿಹಾಸ ಪ್ರಸಿದ್ಧ ಸಯ್ಯದ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. 25 ದಿನ ಕಾಲ ಸಂಜೆ ವೇಳೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಫೆ.10 ರಿಂದ ಮಾ.6 ರವರೆಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮ ನಡೆಯಲಿದೆ. ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸೆಯ್ಯದ್ ಮದನಿ ತಂಙಳ್ ರವರ 429 ನೇ ವಾರ್ಷಿಕ ಹಾಗೂ 21 ನೇ ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ.
ಉರೂಸ್ ಕಾರ್ಯಕ್ರಮ ಮುಗಿದ ನಂತರ ಪ್ರವಾಸಿಗರು ಬೀಚ್ ಗೆ ತೆರಳುವ ಸಾಧ್ಯತೆ ಇರುವುದರಿಂದ ಸಂಜೆ ಬೀಚ್ ಬಂದ್ ಮಾಡಲಾಗಿದೆ. ಉಳ್ಳಾಲ, ಉಳಿಯ, ನೆಹರೂನಗರ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ಣ, ಪೆರಿಬೈಲ್, ಬಟ್ಟಪಾಡಿ ಬೀಚ್ ಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.