ಪೋಷಕರೇ ಗಮನಿಸಿ| ಆರ್ ಟಿಇ ಅಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ|ಖಾಸಗಿ ಶಾಲೆಗಳ ಆಯ್ಕೆ ಪಟ್ಟಿ ಪ್ರಕಟ|
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮೂಲಕ ಉಚಿತವಾಗಿ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ. ಇದೀಗ ಇಲಾಖೆಯು 2022-23 ನೇ ಸಾಲಿಗೆ 1-8 ನೇ ತರಗತಿಗೆ ಪ್ರವೇಶಕ್ಕೆ ಆರ್ ಟಿಇ ಮೂಲಕ ಅರ್ಜಿ ಆಹ್ವಾನಿಸಿದ್ದು, ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ.
ಆರ್ ಟಿಇ ಮೂಲಕ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 03-02-2022
ಆರ್ ಟಿಇ ಮೂಲಕ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-03-2022
ಪಾಲಕರು ತಮ್ಮ ಮಕ್ಕಳನ್ನು ಆರ್ ಟಿಇ ಅಡಿ ಶಾಲೆಗೆ ದಾಖಲಿಸಲು ಮೊದಲು ನೆರೆ ಹೊರೆ ಖಾಸಗಿ ಶಾಲೆಗಳನ್ನು ಚೆಕ್ ಮಾಡಿಕೊಂಡು, ಆದ್ಯತೆ ನೀಡಿ ಅರ್ಜಿ ಸಲ್ಲಿಸಬೇಕು. ಶಾಲೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇಲಾಖೆಯು ಈಗಾಗಲೇ ಬಿಡುಗಡೆ ಮಾಡಿದ್ದು ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ.
ಮೊದಲಿಗೆ ಇಲಾಖೆಯ ವೆಬ್‌ಸೈಟ್ ವಿಳಾಸ ಕ್ಕೆ ಭೇಟಿ ನೀಡಿ.
ಓಪನ್ ಆದ ಪೇಜ್ ನಲ್ಲಿ ಪಾಲಕರು ತಮ್ಮ ಜಿಲ್ಲೆ, ಬ್ಲಾಕ್, ಗ್ರಾಮ, ಇತರೆ ಮಾಹಿತಿ ತುಂಬಿ ‘ View in GISMAP’ ಎಂದು ಕ್ಲಿಕ್ ಮಾಡಿ ಶಾಲೆಗಳ ಪಟ್ಟಿ ನೋಡಬಹುದು.
ಅನಂತರ ಶಾಲೆ ಆಯ್ಕೆ ಮಾಡಿ ಆರ್ ಟಿಇ ಅಡಿ ಪ್ರವೇಶಕ್ಕೆ ಎಷ್ಟು ಸೀಟುಗಳು ಲಭ್ಯ ಎಂದು ಚೆಕ್ ಮಾಡಲು ‘25% RTE Seats’ ಎಂದಿರುವಲ್ಲಿ ಕ್ಲಿಕ್ ಮಾಡಿ.