ಲೇಸ್ ಚಿಪ್ಸ್ ಕವರಿನಿಂದ ಸೀರೆ ತಯಾರಿಸಿದ ನಾರಿ | ಮಿರಮಿರ ಮಿಂಚೋ ಸೀರೆಯಲ್ಲಿ ಮಿಂಚಿದ ಯುವತಿ|

‘ಲೇಸ್’ ಈ ಸ್ನ್ಯಾಕ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಎಲ್ಲರಿಗೂ ಗೊತ್ತು. ಇದು ಎಷ್ಟು ರುಚಿಕರವಾಗಿದೆ ಅಂದರೆ ತಿಂದರೆ ತಿನ್ನುತ್ತನೇ ಇರೋಣ ಅನ್ಸುತ್ತೆ. ಅಂತಿಪ್ಪ ಈ ಲೇಸ್ ನ್ನು ಇಲ್ಲೊಬ್ಬಾಕೆ ಸಾರಿ ತಯಾರಿಸಿ ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾಳೆ. ಇದು ಸಖತ್ ವೈರಲ್ ಕೂಡಾ ಆಗಿದೆ.

 

ಅಲೂಗಡ್ಡೆಯಿಂದ ಏನೇ ಪದಾರ್ಥ, ತಿಂಡಿ ಮಾಡಿದರೂ ರುಚಿಕರವಾಗಿ ಇರುತ್ತದೆ. ಅದರಲ್ಲೂ ಆಲೂಗಡ್ಡೆ ಚಿಪ್ಸ್ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ? ಆದರೆ ಈ ಹುಡುಗಿ ಈ ಲೇಸ್ ಪ್ಯಾಕೆಟ್ ನ್ನು ಬಿಸಾಡದೆ ಅದರಲ್ಲಿ ಸಾರಿ ಒಂದನ್ನು ರೆಡಿ ಮಾಡಿದ್ದಾಳೆ.

ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ನಿಂದ ಸೀರೆ ತಯಾರಿಸಿ ಅದನ್ನುಟ್ಟು ಮೆರೆದಾಡಿದ್ದಾಳೆ ಈ ನಾರಿ. ಈ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾಳೆ. ಪುಟ್ಟದಾದ ಈ ವೀಡಿಯೋದಲ್ಲಿ ಲೇಸ್ ಚಿಪ್ಸ್ ಪ್ಯಾಕೆಟ್ ನ್ನು ಕ್ಯಾಮೆರಾದ ಮುಂದೆ ಬೀಸುತ್ತಿರುವುದು ಹಾಗೂ ಬೆಳ್ಳಿಬಣ್ಣದ ಬಾರ್ಡರ್ ಲೇಸ್ ಪ್ಯಾಕೆಟ್ ನಿಂದ ಮಾಡಿರುವುದು ಕಾಣಬಹುದು‌.

ಈ ಹೊಸದೊಂದು ಶೋಧನೆಗೆ ಈಕೆಗೆ ಹಲವಾರು ರೀತಿಯ ಕಮೆಂಟ್ ಗಳು ಬರುತ್ತಿವೆ. ಈ ಸಾಧನೆಗೆ ಪ್ರಶಂಸೆಗಳನ್ನು ಗಳಿಸಿಕೊಂಡಿದ್ದಾಳೆ ಈ ಯುವತಿ.

Leave A Reply

Your email address will not be published.