ರಾಜ್ಯಾದ್ಯಂತ ಹಿಜಾಬ್ ವಿವಾದ ಪ್ರಕರಣ | ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ |ನಾಳೆ ಮಧ್ಯಾಹ್ನ 2.30 ಕ್ಕೆ ಮರು ವಿಚಾರಣೆ
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದೆ.
ಅರ್ಜಿದಾರರ ಸಂಪೂರ್ಣ ವಾದ ಕೇಳಿದ್ದೇನೆ.ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗುವುದು ಸರಿಯಲ್ಲ. ಶಾಂತಿ ಭಂಗ ಮಾಡದಂತೆ ಹೈಕೋರ್ಟ್ ನ್ಯಾ ಯ ಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮನವಿ ಮಾಡಿದ್ದಾರೆ. ವಾದ ವಿವಾದದ ನಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆ ಪ್ರಾರಂಭದಲ್ಲಿ ಕಾನೂನು ಪ್ರಕಾರ ವಿಚಾರಣೆ ಮಾಡೋಣ, ಎಲ್ಲಾ ಭಾವನೆಗಳನ್ನು ಹೊರಗಿಡಿ. ಸಂವಿಧಾನವೇ ಭಗವದ್ಗೀತೆ. ಹೀಗಾಗಿ ಸಂವಿಧಾನದ ಪ್ರಕಾರ ನಡೆಸೋಣ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯ ಪಟ್ಟರು.
ಉಡುಪಿಯ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪಾಠ ಕೇಳಲು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದರೊಂದಿಗೆ ಸಲ್ಲಿಕೆಯಾಗಿರುವ ನಾಲ್ಕು ರಿಟ್ ಅರ್ಜಿಗಳ ವಿಚಾರಣೆ ಇಂದು ಹೈ ಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ನಡೆದಿತ್ತು.
ರಾಜ್ಯಸರಕಾರ ಈಗಾಗಲೇ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಸಂಹಿತೆ ಕುರಿತಂತೆ ಸುತ್ತೋಲೆ ಹೊರಡಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಎಂದು ಕುರಾನ್ ನಲ್ಲಿ ಉಲ್ಲೇಖವಿದೆ. ಸಂವಿಧಾನದ 19(1) A ಹಾಗೂ 21 ನೇ ವಿಧಿ ಅಡಿಯಲ್ಲಿ ಇಚ್ಛೆಯ ಬಟ್ಟೆ ಧರಿಸುವ ಹಕ್ಕಿದೆ ಎಂದು ವಾದ ಮಂಡಿಸಿದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಯ ಹೈಕೋರ್ಟ್ ಲೈಬ್ರರಿಯಿಂದ ಕುರಾನ್ ಪ್ರತಿ ತರಿಸಲು ಸೂಚಿಸಿದ್ದು, ಶಾಂತಿ ಪ್ರಕಾಶನದ ಕುರಾನ್ ಅಧಿಕೃತವೆಂದು ಪರಿಗಣಿಸಬಹುದೇ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಅರ್ಜಿದಾರರು ಕೇರಳ ಹೈಕೋರ್ಟ್ ತೀರ್ಪು ಉಲ್ಲೇಖಿಸಿದ್ದು, ಎದೆಯ ಮೇಲೆ, ಶಿರದ ಮೇಲೆ ವಸ್ತ್ರ ಧರಿಸಬೇಕು, ಖಾಸಗಿ ಅಂಗಗಳ ಮೇಲೆ ವಸ್ತ್ರ ಧರಿಸಬೇಕು ಪತಿ, ಮಕ್ಕಳು, ಸಖಿಯರು, ಆಪ್ತ ವರ್ಗದವರ ಮುಂದೆ ಮಾತ್ರ ಹಿಜಾಬ್ ಗೆ ವಿನಾಯಿತಿ ಇರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಹೈಕೋರ್ಟ್ ಕುರಾನ್ ನ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೇ ಎಂದು ಕೇಳಿದೆ. ಇದಕ್ಕೆ ವಕೀಲ ದೇವದತ್ ಕಾಮತ್ ಧಾರ್ಮಿಕ ಆಚರಣೆ ಸರಕಾರದ ನಿಯಮದ ನಡುವೆ ಗೊಂದಲವಿದ್ದಾಗ ಕೋರ್ಟ್ ಇದನ್ನು ತೀರ್ಮಾನಿಸಬೇಕು ಎಂದು ಕೇರಳ ಹೈಕೋರ್ಟ್ ತೀರ್ಪನ್ನು ನ್ನು ಉಲ್ಲೇಖಿಸಿದರು.
ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ? ಎಂಬ ನ್ಯಾಯಮೂರ್ತಿಯವರ ಪ್ರಶ್ನೆಗೆ ಹೌದು ಎಂದು ಅರ್ಜಿದಾರರ ಪರವಾದ ವಕೀಲರು ಹೇಳಿದ್ದಾರೆ. ಹಿಜಾಬ್ ಕೂಡಾ ಅತ್ಯಂತ ಅತ್ಯಗತ್ಯ ಧಾರ್ಮಿಕ ಆಚರಣೆಯೇ. ಇದರಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿಲ್ಲ. ಹಿಜಾಬ್ ಧರಿಸಿ ಹೋದರೆ ವೈವಿಧ್ಯತೆಗಳಿಗೆ ಧಕ್ಕೆ ಇಲ್ಲ. ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯಾತೀತತೆ. ಸಿಖ್ಖರಿಗೆ ಪಂಚಕಗಳನ್ನು ಕಡ್ಡಾಯ ಮಾಡಲಾಗಿದೆ. ಅದು ಸಿಖ್ಖರ ಧಾರ್ಮಿಕ ಆಚರಣೆ ಎಂಬ ಉದಾಹರಣೆಯನ್ನು ಹೇಳಿದ್ದಾರೆ.
ಹಂದಿಮರಿಯೊಂದಿಗೆ ಮಾರುಕಟ್ಟೆಗೆ ಹೋದರೆ ಸಮಸ್ಯೆ ಇಲ್ಲ ಕೆಲವರು ನಗಬಹುದು ಅಷ್ಟೇ ಆದರೆ ಆದರೆ ದೇವಾಲಯ ಚರ್ಚ್ , ಕೊಂಡುಹೋದರೆ ಸಮಸ್ಯೆ ಉಂಟಾಗುತ್ತದೆ ಎಂದು ಲಘುಧಾಟಿಯಲ್ಲಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಜಿ ಅವರು ಅರ್ಜಿದಾರರ ಆರೋಪಗಳನ್ನು ದಾಖಲಿಸಬೇಡಿ ಎಂದು ನ್ಯಾಯಮೂರ್ತಿ ಅವರಲ್ಲಿ ವಿನಂತಿ ಮಾಡಿಕೊಂಡಾಗ, ಇಲ್ಲ ಅರ್ಜಿದಾರರ ಪರ ದಾಖಲೆಗಳನ್ನು ದಾಖಲಿಸುತ್ತೇವೆ ಹಾಗೂ ನಿಮ್ಮ ಆಕ್ಷೇಪಣೆಗಳನ್ನು ಕೂಡಾ ದಪ್ಪ ಅಕ್ಷರಗಳಲ್ಲಿ ದಾಖಲಿಸುತ್ತೇವೆ ಎಂದು ನ್ಯಾಯಮೂರ್ತಿ ಹೇಳುತ್ತಾರೆ. ವಾದ ಮುಂದುವರಿಸುತ್ತಾ ಅರ್ಜಿದಾರರ ಪರ ವಕೀಲರು,
ಇಚ್ಛೆಯಂತೆ ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ಸರಕಾರಕ್ಕೆ ಈ ಆದೇಶ ಹೊರಡಿಸುವ ಅಧಿಕಾರ ಇಲ್ಲ. ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಅತ್ಯಗತ್ಯಭಾಗವಾಗಿದೆ. ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ಹಾಗಾಗಿ ಅಲ್ಲಿಯವರೆಗೆ ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲು ಅನುಮತಿ ನೀಡಬೇಕು. ನಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ನಡೆತಾ ಇದೆ. ಧರಣಿ ಪ್ರತಿಭಟನೆಗೆ ನಿರ್ಬಂಧ ಹೇರಲು ಮನವಿಯನ್ನು ಮಾಡಿಕೊಳ್ಳುತ್ತಾರೆ ಎ ಜಿ ಪ್ರಭುಲಿಂಗ ನಾವದಗಿ ಹೇಳುತ್ತಾರೆ.
ಅರ್ಜಿದಾರರ ಸಂಪೂರ್ಣ ವಾದ ಕೇಳಿದ್ದೇನೆ. ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗುವುದು ಸರಿಯಲ್ಲ. ಶಾಂತಿ ಭಂಗ ಮಾಡದಂತೆ ಹೈಕೋರ್ಟ್ ನ್ಯಾಯಮೂರ್ತಿ ಮನವಿಯನ್ನು ಮಾಡಿದ್ದಾರೆ.