ದುಬೈ ಗೆ ತೆರಳುತ್ತೇನೆ ಎಂದು ಮನೆಯಿಂದ ಹೊರಟಿದ್ದ ವ್ಯಕ್ತಿಯ ಮೃತದೇಹ ಕಡಲ ಕಿನಾರೆಯಲ್ಲಿ ಪತ್ತೆ!!
ಖ್ಯಾತ ಆರ್ಕಿಟೆಕ್ಟ್ ಆಗಿ ಸಿರಿವಂತಿಕೆಯಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ವ್ಯಕ್ತಿಯೋರ್ವರ ಬಾಳಿನಲ್ಲಿ ಅಕ್ರಮ ಸಂಬಂಧವೆಂಬ ಬಿರುಗಾಳಿ ಎದ್ದು,ಸೋಮೇಶ್ವರದ ಕಡಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಜೀವನವೇ ಕೊನೆಯಾದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ನಡೆದಿದ್ದು,ಮೃತ ವ್ಯಕ್ತಿಯನ್ನು ಮೂಲತಃ ಕುತ್ತಾರು ತೇವುಳ ನಿವಾಸಿ ಉಳ್ಳಾಲ ಪರಿಸರದಲ್ಲಿ ಖ್ಯಾತರಾಗಿದ್ದ ಸಿವಿಲ್ ಆರ್ಕಿಟೆಕ್ಟ್ ಸುರೇಶ್ ಸಾಲ್ಯಾನ್ ಎಂದು ಗುರುತಿಸಲಾಗಿದೆ.
ಘಟನೆ ವಿವರ: ಉಳ್ಳಾಲ-ತೊಕ್ಕೊಟ್ಟು ಪರಿಸರದಲ್ಲಿ ಸಿವಿಲ್ ಕಾಂಟ್ರಾಕ್ಟ್ ಮೂಲಕ ಜನರ ಪ್ರೀತಿಯನ್ನು ಗಳಿಸಿದ್ದ ಕುತ್ತಾರು ಮೂಲದ ಸುರೇಶ್ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಘಟನೆ ನಡೆಯುವ ಹಿಂದಿನ ದಿನ ಸ್ನೇಹಿತರ ಜೊತೆ ಸೇರಿ ಕೆಲಸದ ವಿಚಾರವಾಗಿ ಚರ್ಚಿಸಿ ಮನೆಗೆ ಬಂದಿದ್ದ ಸುರೇಶ್,ದುಬೈ ಗೆ ತೆರಳುತ್ತೇನೆ ಎಂದು ಹೇಳಿ ರಾತ್ರೋ ರಾತ್ರಿ ಮನೆಯಿಂದ ಹೊರಟು ಆ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಾರಾನೆಯ ದಿನ ಸೋಮೇಶ್ವರದ ಕಡಲ ಕಿನಾರೆಯಲ್ಲಿ ಚಪ್ಪಲಿ ಪತ್ತೆಯಾಗಿದ್ದು, ಆ ಬಳಿಕ ಮೃತದೇಹ ಪತ್ತೆಯಾಗಿದೆ.
ಅಕ್ರಮ ಸಂಬಂಧದ ಘಾಟು
ಸುರೇಶ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅದಲ್ಲದೇ ಇತ್ತೀಚಿಗಷ್ಟೇ ಕೊಲ್ಯ ಸಮೀಪದಲ್ಲಿ ನೂತನ ಐಷಾರಾಮಿ ಮನೆಯನ್ನೂ ಕಟ್ಟಿಸಿದ್ದರು. ಆದರೆ ಅನೈತಿಕ ಸಂಬಂಧ ವಿಚಾರ ಪತಿ-ಪತ್ನಿಯ ನಡುವೆ ಮನಸ್ತಾಪ ಉಂಟಾಗಿದೆ. ಸುರೇಶ್ ಗೆ ಕೊಣಾಜೆಯ ಎರಡು ಮಕ್ಕಳ ತಾಯಿಯೊಂದಿಗೆ ಅನೈತಿಕ ಸಂಬಂಧ ಇರುವುದು ಪತ್ನಿಯ ಗಮನಕ್ಕೆ ಬಂದಿದ್ದು ಮನಸ್ತಾಪಕ್ಕೂ ಕಾರಣವಾಗಿದೆ. ಈ ಬಗ್ಗೆ ಸುರೇಶ್ ಅವರೇ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿ, ಆ ಬಳಿಕ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆದು ಇಬ್ಬರೂ ಹೊಂದಿಕೊಂಡು ಬಾಳುವ ಮಟ್ಟಕ್ಕೆ ಬಂದಿತ್ತು.
ಇದಾದ ಬಳಿಕ ಸುರೇಶ್ ಖಿನ್ನತೆಗೆ ಒಳಗಾಗಿದ್ದು, ಅರೋಗ್ಯದಲ್ಲೂ ಏರುಪೇರಾಗಿದೆ. ತನ್ನ ಕಚೇರಿಯಲ್ಲಿ ಇತರರೊಡನೆ ಮೂರು ತಿಂಗಳ ಮಟ್ಟಿಗೆ ದುಬೈ ಗೆ ತೆರಳುತ್ತಿರುವುದಾಗಿ ಹೇಳಿ ಮನೆ ಸೇರಿದ್ದ ಸುರೇಶ್, ಮಧ್ಯರಾತ್ರಿ ಮನೆಯವರಲ್ಲಿಯೂ ದುಬೈ ಗೆ ತೆರಳುತ್ತಿರುವುದಾಗಿ ಹೇಳಿ ಹೋಗಿದ್ದರು.
ಆದರೆ ಮಾರಾನೆಯ ದಿನ ಸುರೇಶ್ ಮೃತದೇಹ ಪತ್ತೆಯಾಗಿದ್ದು, ಅನೈತಿಕ ಸಂಬಂಧಕ್ಕೆ ಸಿರಿವಂತಿಕೆಯಿಂದ ಬಾಳ ಬೇಕಾಗಿದ್ದ ದಾಂಪತ್ಯವೇ ದುರಂತ ಅಂತ್ಯ ಕಂಡಿದೆ.