ಬಂಟ್ವಾಳ:ವಾಮದಪದವಿನ ಕಾಲೇಜಿಗೂ ಕೇಸರಿ ಧರಿಸಿ ಬಂದ ವಿದ್ಯಾರ್ಥಿಗಳು!! ಘೋಷಣೆ ಕೂಗುವ ಮೂಲಕ ಹಿಜಾಬ್ ನಿರ್ಬಂಧಿಸಲು ಆಗ್ರಹ

ಬಂಟ್ವಾಳ:ತಾಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಇಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದು, ಸ್ಕಾರ್ಫ್ ಧರಿಸುವುದಕ್ಕೆ ಅವಕಾಶ ಕೊಡದೆ ನಿರ್ಬಂಧಿಸಬೇಕೆಂದು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು.

 

ಕಾಲೇಜಿನ ಎಲ್ಲಾ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಸರು ಶಾಲು ಧರಿಸಿ ಕಾಲೇಜು ಆವರಣದಲ್ಲಿ ಸೇರಿದ್ದು ಕೆಲ ಹೊತ್ತು ಪ್ರತಿಭಟನೆ, ಘೋಷಣೆ ಕೂಗಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಧರಿಸಿ ಬರುವಂತೆ ಸಂದೇಶಗಳು ಹರಿದಾಡುತ್ತಿದ್ದವು, ಇದರಿಂದ ಪ್ರೇರಿತಗೊಂಡ ವಿದ್ಯಾರ್ಥಿಗಳು ಕೇಸರಿ ಧರಿಸಿ ಕಾಲೇಜು ಆವರಣ ಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.