‘ಸರಕಾರಿ ನೌಕರರ ಸಂಘ’ ವನ್ನು ಜಾತಿ, ಧರ್ಮದ ಆಧಾರದ ಮೇಲೆ ರಚಿಸಲು ಅವಕಾಶವಿಲ್ಲ ; ರಾಜ್ಯ ಸರಕಾರದಿಂದ ಆದೇಶ
ಜಾತಿ, ಧರ್ಮ ಇತ್ಯಾದಿ ಒಳಗಿರುವ ಯಾವುದೇ ಸಮೂಹ ಆಧಾರದ ಮೇಲೆ ಸರಕಾರಿ ನೌಕರರ ಸೇವಾ ಸಂಘಗಳನ್ನು ರಚಿಸಬಾರದು ಎಂದು ಸರಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಆದೇಶ ಹೊರಡಿಸಿದ್ದಾರೆ.
ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ವ್ಯಕ್ತಿಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿರುವ ಯಾವುದೇ ಸೇವಾ ಸಂಘಕ್ಕೆ ಮಾನ್ಯತೆ ನೀಡಬಹುದಾಗಿದ್ದು, ಎಲ್ಲಾ ಅಂತಹ ಸರಕಾರಿ ನೌಕರರು ಸಂಘದ ಸದಸ್ಯತ್ವಕ್ಕೆ ಅರ್ಹರಾಗಿರುತ್ತಾರೆ.
ಸದರಿ ಸಂಘವು ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ಸೇವಾ ಸಂಘಗಳಿಗೆ ಮಾತ್ರ ಇಲಾಖೆಗಳು ಮಾನ್ಯತೆ ನೀಡುವಂತೆ ಮತ್ತು ಈಗಾಗಲೇ ಜಾತಿ, ಧರ್ಮ, ಇತ್ಯಾದಿ ಯಾವುದೇ ಸಮೂಹದ ಮೇಲೆ ರಚಿತವಾಗಿರುವ ಸೇವಾ ಸಂಘಗಳ ಮಾನ್ಯತೆಯನ್ನು ರದ್ದು ಪಡಿಸುವಂತೆ ಹಾಗೂ ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘಗಳನ್ನು ನಿರ್ಬಂಧಿಸುವಂತೆ ಆಡಳಿತ ಇಲಾಖೆಗಳಿಗೆ / ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇಷ್ಟು ಮಾತ್ರವಲ್ಲದೇ ಇಲಾಖೆಯಲ್ಲಿನ ಪ್ರತಿಯೊಂದು ವೃಂದದಲ್ಲಿ ಒಂದು ಸೇವಾ ಸಂಘಕ್ಕಿಂತ ಹೆಚ್ಚಿನದ್ದಕ್ಕೆ ಮಾನ್ಯತೆ ನೀಡತಕ್ಕದ್ದು. ಹಾಗೂ ಒಂದು ಸೇವಾ ಸಂಘವನ್ನು ಸರಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮ, ಇತ್ಯಾದಿ ಒಳಗಿರುವ ಯಾವುದೆ ಸಮೂಹ ಆಧಾರದ ಮೇಲೆ ರಚಿಸತಕ್ಕದ್ದಲ್ಲ ಎಂದು ರಾಜ್ಯ ಸರಕಾರ ಆದೇಶ ನೀಡಿದೆ.