ಸಮವಸ್ತ್ರ ಧರಿಸದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ| ದಯವಿಟ್ಟು ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಶಿಕ್ಷಣ ಸಚಿವ!!
ಬೆಂಗಳೂರು : ಸರಕಾರ ನಿಗದಿ ಮಾಡಿರುವ ಸಮವಸ್ತ್ರ ಧರಿಸಿ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲಿ. ನಿಯಮ ಉಲ್ಲಂಘಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಸಿದ್ದಾರೆ.
ಶಾಲೆಗೆ ಶಿಕ್ಷಣಕ್ಕಾಗಿ ಬರಬೇಕು. ಧರ್ಮ ಪಾಲನೆಗೆ ನಮ್ಮವಿರೋಧವಿಲ್ಲ. ಶಿಕ್ಷಣ ಎಲ್ಲರಿಗೂ ಒಂದೇ. ಆ ರೀತಿ ಬರುವಾಗ ಸಮವಸ್ತ್ರ ಧರಿಸಿಯೇ ಬರಬೇಕು. ಶಾಲೆಯ ನಿಯಮಗಳನ್ನು ಪಾಲಿಸಬೇಕು. ಕೋರ್ಟ್ ನೀಡುವ ತೀರ್ಪು ಆಧರಿಸಿ ಹೊಸ ನಿಯಮ ಮಾಡುತ್ತೇವೆ. ಅಲ್ಲಿಯವರೆಗೆ ಈಗಿರುವ ನಿಯಮವೇ ಮುಂದುವರಿಯುತ್ತದೆ. ಹಿಜಾಬ್ ವಿವಾದ ಬಳಸಿ ಘರ್ಷಣೆ ಸೃಷ್ಟಿಸುವ ಹುನ್ನಾರವೂ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಅಸಮಾಧಾನ ಹೊರಹಾಕಿದ್ದಾರೆ.
‘ರಾಜಕೀಯ ಕ್ಷೇತ್ರವನ್ನು ಹಾಳು ಮಾಡಿ ಆಗಿದೆ.ದಯವಿಟ್ಟು ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಬೇಡಿ ಎಂದು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈ ರೀತಿಯಾಗಿ ತಮ್ಮ ಆಕ್ರೋಶವನ್ನು ಶಿಕ್ಷಣ ಸಚಿವರು ಹೊರಹಾಕಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಬಾರದು ಎಂದಿದ್ದಾರೆ.
95 ಮಕ್ಕಳ ಪೈಕಿ 6 ಮಕ್ಕಳು ಮಾತ್ರ ಹಿಜಾಬ್ ಧರಿಸಿದ್ದಾರೆ. ಒಬ್ಬ ಲಾಯರ್ ಆಗಿ ನೀವು ಈ ರೀತಿ ಮಾತನಾಡಬೇಡಿ. ಶಾಲೆ ಸೂಚಿಸಿದ ಯೂನಿಫಾರಂ ಧರಿಸುತ್ತೇವೆ ಎಂದು ಉಳಿದ ಮಕ್ಕಳೇ ಬರೆದುಕೊಟ್ಟಿದ್ದಾರೆ. ನಾವೆಲ್ಲರೂ ಒಂದೇ ಎನ್ನಲು ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಬಿ ಸಿ ನಾಗೇಶ್ ಅವರು.