ಆನೆಯ ಕೆಚ್ಚೆಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಯತ್ನಿಸಿದ ಪುಟ್ಟ ಪೋರಿ|ಕಾಲ ಬಳಿ ಆಕೆ ಇದ್ದರೂ ಏನು ಮಾಡದೆ ಮಾತೃ ವಾತ್ಸಲ್ಯ ತೋರಿಸಿದ ಆನೆ
ಮಕ್ಕಳಿಗೆ ತಾಯಿಯ ಹಾಲು ವರದಾನ. ಮಕ್ಕಳ ಆರೋಗ್ಯಕ್ಕೆ ಇದು ಸಹಾಯಕಾರಿ.ಸಣ್ಣವರಿರುವಾಗ ಮಕ್ಕಳು ಹಾಲು ಕುಡಿದರೆ ಗಟ್ಟಿಮುಟ್ಟಾಗಿ ಇರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಬ್ಬಳು ಪುಟ್ಟ ಪೋರಿ ಹಾಲು ಕುಡಿಯಲು ಆನೆಯ ಕೆಚ್ಚಲಿಗೆ ಬಾಯಿಟ್ಟಿದ್ದಾಳೆ. ಅದರ ಹಾಲು ಕುಡಿಯಲು ಯತ್ನಿಸಿದ್ದಾಳೆ. ಈ ಘಟನೆ ನಡೆದಿರುವುದಿ ಅಸ್ಸಾಂನ ಗೋಲ್ಗಾಟ್ ಜಿಲ್ಲೆಯಲ್ಲಿ.
ಹರ್ಷಿತಾ ಬೋರಾ ಎಂಬ ಮೂರು ವರ್ಷದ ಬಾಲಕಿ ಆನೆ ಕ್ಯಾಂಪ್ ನಲ್ಲಿ ಆಟವಾಡುತ್ತಿದ್ದಾಗ ಬಿನು ಎಂಬ ಆನೆಯ ಕಾಲುಗಳ ಬಳಿ ನಿಲ್ಲುವ ಸಾಹಸ ಮಾಡುತ್ತಾಳೆ. ನಂತರ ಅದರ ಕೆಚ್ಚಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಪ್ರಯತ್ನ ಪಡುತ್ತಾಳೆ. ಆದರೆ ಕೆಚ್ಚಲು ಸಿಗದಿದ್ದದ್ದಕ್ಕೆ ಸುಮ್ಮನಾಗುತ್ತಾಳೆ. ಬಿನು ಎಂಬ ಆನೆಯ ಕಾಲು ಬಳಿ ಈ ಬಾಲಕಿ ನಿಂತಿದ್ದರೂ ಏನೂ ಮಾಡದೇ ಮಾತೃ ವಾತ್ಸಲ್ಯ ತೋರಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.