ಸಸ್ಯಾಹಾರಿಗಳಿಗಾಗಿಯೇ ಬಂದಿದೆ ‘ವೆಜ್ ಫಿಶ್ ಫ್ರೈ’|ಸಂಪೂರ್ಣವಾಗಿ ವೆಜ್ ನಿಂದಲೇ ತಯಾರಾಗೋ ಈ ಮೀನಿನ ಫ್ರೈ ಹೇಗೆಂದು ಇಲ್ಲಿದೆ ನೋಡಿ..
ಆಹಾರ ಪ್ರೀಯರು ಯಾರಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಫುಡ್ ಮೇಲೆ ವ್ಯಾಮೋಹ ಇದ್ದೇ ಇದೆ.ಸಾಮಾನ್ಯವಾಗಿ ಮಾಂಸಾಹಾರಿಗಳಿಗೆ ಬಗೆ ಬಗೆಯ ಐಟಂಗಳು ಲಭ್ಯವಾಗುತ್ತದೆ.ಒಂದೇ ಆಹಾರದಿಂದ ಬಗೆ ಬಗೆಯ ತಿನಿಸು ತಯಾರಾಗುತ್ತದೆ. ಆದ್ರೆ ಸಸ್ಯಾಹಾರಿ ಪ್ರಿಯರಿಗೆ ತಿಂದಿದ್ದೆ ತಿನ್ನೋ ಹಾಗಾಗಿದೆ. ಆದ್ರೆ ಈಗ ನಿಮಗಾಗಿ ಬಂದಿದೆ ಖುಷಿ ವಿಚಾರ. ಅದೇನೆಂದು ಮುಂದೆ ಓದಿ.
ಹೌದು. ಇನ್ನು ಮುಂದೆ ವೆಜ್ ಪ್ರೀಯರಿಗೂ ಬರಲಿದೆ ಫಿಶ್ ಫ್ರೈ. ಏನಿದು? ಮೀನಿನ ವಾಸನೆ ಬಂದೊಡನೆ ಓಡಿ ಹೋಗೋ ಸಸ್ಯಾಹಾರಿಗಳಿಗೆ ಮೀನು ಫ್ರೈ ಯಾ? ಎಂಬ ಯೋಚನೆಯಲ್ಲಿರೋರು ಇಲ್ಲಿ ಕೇಳಿ.ಇದು ನೀವು ಅಂದುಕೊಂಡಂತೆ ನಾನ್ ವೆಜ್ ಅಲ್ಲ. ಇದು ವೆಜ್ ಪ್ರೀಯರಿಗಾಗಿಯೇ ವೆಜ್ ಹೋಟೆಲ್ ಗಳಲ್ಲಿ ತಯಾರಾಗಲಿದೆ ‘ವೆಜ್ ಫಿಶ್ ಫ್ರೈ’.
ದೆಹಲಿಯ ಖಾಸಗಿ ಹೋಟೆಲ್ ಒಂದು ಸಂಪೂರ್ಣ ಸಸ್ಯಾಹಾರದ ಮೀನಿನ ಫ್ರೈ ತಯಾರಿಸಿದೆ.ಇದನ್ನ ನೋಡಿ ಸಸ್ಯಾಹಾರಿ ಪ್ರಿಯರು ಇನ್ನು ಮುಂದೆ ನಾವು ಕೂಡ ವೆಜ್ ಫಿಶ್ ಫ್ರೈ ಸೇವನೆ ಮಾಡಬಹುದು ಎಂದು ಫುಲ್ ಹ್ಯಾಪಿ ಆಗಿದ್ದಾರೆ.ಅಷ್ಟಕ್ಕೂ ಸಂಪೂರ್ಣವಾಗಿ ಯಾವ ರೀತಿ ಈ ಫಿಶ್ ಫ್ರೈ ತಯಾರಿಸುತ್ತಾರೆ ಎಂಬುದು ಇಲ್ಲಿದೆ ನೋಡಿ..
ಈ ಮೀನಿನ ಫ್ರೈ ಸಂಪೂರ್ಣ ಸೋಯಾಬೀನ್ಸ್ ನಿಂದ ಮಾಡಲಾಗಿದೆ.ಆಹಾರ ಬ್ಲಾಗರ್ ಅಮರ್ ಸಿರೋಹಿ ಎಂಬುವವರು ಸೋಯಾಬೀನ್ ನಿಂದ ಮಾಡಿದ ವೆಜ್ ಫಿಶ್ ಫ್ರೈ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವೆಜ್ ಫಿಶ್‌ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.ಇನ್ನು ವಿಡಿಯೋದಲ್ಲಿ ಫುಡ್ ಬ್ಲಾಗರ್ ಈ ವೆಜ್ ಫಿಶ್ ಫ್ರೈ ಅನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ತೋರಿಸುವ ಜೊತೆ ಹೇಳುತ್ತಾರೆ. ಅಲ್ಲದೇ ಇದು ಕೂಡ ಮಾಮೂಲಿ ಮೀನಿನ ತರಹವೇ ರುಚಿಯನ್ನು ಹೊಂದಿದೆ ಎಂದು ಇದನ್ನು ತಯಾರಿಸುವವರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.
ಇನ್ನು ಇದುವರೆಗೂ 3.8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ ಹಾಗೂ ಕಾಮೆಂಟ್‌ಗಳು ಬಂದಿದ್ದು, ಇದು ಕುತೂಹಲಕಾರಿಯಾಗಿದೆ, ಬಾಯಲ್ಲಿ ನೀರೂರಿಸುವಂತಿದೆ ಎಂದೆಲ್ಲಾ ನೋಡುಗರು ಕಾಮೆಂಟ್ ಮಾಡಿದ್ದಾರೆ.ಒಟ್ಟಾರೆ ಇಷ್ಟು ದಿನ ಮಾಂಸಾಹಾರಿಗಳ ಪಾಲಿಗೆ ಮಾತ್ರ ಸೀಮಿತವಾಗಿದ್ದ ಮೀನಿನ ಫ್ರೈ, ಈಗ ಸೋಯಾಬೀನ್ ಮೀನಿನ ರೂಪದಲ್ಲಿ ಸಸ್ಯಾಹಾರಿಗಳಿಗೆ ಲಭ್ಯವಾಗಲಿದೆ.