ESIC ಯಿಂದ 3847 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನಾಂಕ

ಕಾರ್ಮಿಕ ರಾಜ್ಯ ವಿಮಾ ನಿಗಮವು( ಇಎಸ್ಐಸಿ) ದೇಶದಾದ್ಯಂತದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಸೇರಿದಂತೆ ಒಟ್ಟು 3847 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ ಆಕ್ಟಿವೇಟ್ ಮಾಡಲಾಗಿದೆ.

ಕರ್ನಾಟಕದಲ್ಲಿ ಒಟ್ಟು 282 ಹುದ್ದೆಗಳನ್ನು ಭರ್ತಿ ಮಾಡಲಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ :
ಅಪ್ಪರ್ ಡಿವಿಷನ್ ಕ್ಲರ್ಕ್ : 199 ಸ್ಟೆನೋಗ್ರಾಫರ್ 18
ಮಲ್ಟಿ ಟಾಸ್ಕಿಂಗ್ ಸ್ಟಾಫ್ :65

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 -02-2022
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆ ದಿನಾಂಕ : 15-02-2022
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 02-03-2022

ವಯೋಮಿತಿ : ಅಪ್ಪರ್ ಡಿವಿಷನ್ ಕ್ಲರ್ಕ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ‌ 18 ವರ್ಷ, ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಗಳು ಮೀರಿರಬಾರದು.

ಶುಲ್ಕ : ಎಸ್/ ಎಸ್ ಟಿ/ ಪಿಡ್ಬ್ಲೂಡಿ / ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.250/-, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.500/-
ಆರ್ಥಿಕವಾಗಿ ಹಿಂದುಳಿದ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 500/-

ವಿದ್ಯಾರ್ಹತೆ:
ಅಪ್ಪರ್ ಡಿವಿಷನ್ ಕ್ಲರ್ಕ್ : ಯಾವುದೇ ಪದವಿ ಪಾಸಾಗಿರಬೇಕು.

ಸ್ಟೆನೋಗ್ರಾಫರ್ : ದ್ವಿತೀಯ ಪಿಯುಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ

ಮಲ್ಟಿ ಟಾಸ್ಕಿಂಗ್ ಸ್ಟಾಫ್ : SSLC ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ.

ವೇತನ : ಅಪ್ಪರ್ ಡಿವಿಷನ್ ಕ್ಲರ್ಕ್ : ರೂ.25,500- 81,100 ಸ್ಟೆನೋಗ್ರಾಫರ್ – ರೂ.25,500-81,100

ಮಲ್ಟಿ ಟಾಸ್ಕಿಂಗ್ ಸ್ಟಾಫ್ : ರೂ.18,000 – 56,900

ಅರ್ಜಿ ಸಲ್ಲಿಸುವುದು ಹೇಗೆ ?

ಕರ್ನಾಟಕ ರಾಜ್ಯ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಓಪನ್ ಆದ ಪೇಜಲ್ಲಿ’ ಕ್ಲಿಕ್ ಹಿಯರ್ ಟು ಸಬ್ಮಿಟ್ ಆನ್ಲೈನ್ ಅಪ್ಲಿಕೇಶನ್ ಫಾರ್ ರಿಕ್ರುಟ್ ಮೆಂಟ್ ಟು ದಿ ಪೋಸ್ಟ್ ಆಫ್ ಅಪ್ಪರ್ ಡಿವಿಶನ್ ಕ್ಲರ್ಕ್ , ಸ್ಟೆನೋಗ್ರಾಫರ್ ಆಂಡ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಇನ್ ಇಎಸ್ ಐಸಿ ‘ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಓಪನ್ ಆಗುವ ಪೇಜ್ ನಲ್ಲಿ ಮೊದಲು ರಿಜಿಸ್ಟ್ರೇಶನ್ ಮಾಡಿಕೊಳ್ಳಿ, ಲಾಗಿನ್ ಆಗಿ ಅರ್ಜಿ ಪೂರ್ಣಗೊಳಿಸಿ. ಅರ್ಜಿಯನ್ನು ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ : ಎಲ್ಲಾ ಹುದ್ದೆಗಳ ಆಯ್ಕೆಗೆ ಆನ್ಲೈನ್ ಪರೀಕ್ಷೆ ನಡೆಸಲಿದ್ದು, ( ಪ್ರಿಲಿಮ್ಸ್ ಪರೀಕ್ಷೆ, ಮುಖ್ಯ ಪರೀಕ್ಷೆ, ಸ್ಕಿಲ್ ಟೆಸ್ಟ್ ) ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅಧಿಕೃತ ವೆಬ್‌ಸೈಟ್‌ ನಲ್ಲಿ ಬಿಡುಗಡೆ ಮಾಡಲಾಗುವುದು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Leave A Reply

Your email address will not be published.