ಉದ್ಯೋಗಾಂಕ್ಷಿಗಳೇ ಗಮನಿಸಿ : ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಿಂದ ನೇಮಕಾತಿ| 1501 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನಾಂಕ

ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ 1501 ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ.

 

ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 25-01-2022
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 23-02-2022
ಅರ್ಹತಾ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ದಿನಾಂಕ : 03-03-2022
ಆನ್ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ ಪ್ರಕಟಣೆ : 15-03-2022

ಸ್ಕಿಲ್ಡ್ ಐಡಿ – 1 ಹುದ್ದೆಗಳು :

  • ಎಸಿ ರೆಫ್. ಮೆಕ್ಯಾನಿಕ್ : 18
  • ಕಂಪ್ರೆಸರ್ ಅಟೆಂಡಂಟ್ : 28
  • ಬ್ರಾಸ್ ಫಿನಿಶರ್ : 20
  • ಕಾರ್ಪೆಂಟರ್ : 50
  • ಚಪ್ಪರ್ ಗ್ರಿಂಡರ್ : 06
  • ಕಾಂಪೊಸೈಟ್ ವೆಲ್ಡರ್ : 183
  • ಡೀಸೆಲ್ ಕ್ರೇನ್ ಆಪರೇಟರ್ : 10
  • ಡೀಸೆಲ್ ಕಮ್ ಮೊಟಾರ್ ಮೆಕ್ಯಾನಿಕ್ : 07
  • ಇಲೆಕ್ಟ್ರಿಕ್ ಕ್ರೇನ್ ಆಪರೇಟರ್ಸ್ : 11
  • ಇಲೆಕ್ಟ್ರಿಷಿಯನ್ : 58
  • ಇಲೆಕ್ಟ್ರಾನಿಕ್ ಮೆಕ್ಯಾನಿಕ್ : 100
  • ಫಿಟ್ಟರ್ : 83
  • ಗ್ಯಾಸ್ ಕಟ್ಟರ್ : 92
  • ಮೆಕ್ಯಾನಿಸ್ಟ್ : 14
  • ಮಿಲ್ ರೈಟ್ ಮೆಕ್ಯಾನಿಕ್ : 27
  • ಪೇಂಟರ್ : 45
  • ಪೈಪ್ ಫಿಟ್ಟರ್ : 69
  • ಸ್ಟ್ರಕ್ಚರಲ್ ಫ್ಯಾಬ್ರಿಕೇಟರ್ : 344
  • ಯುಟಿಲಿಟಿ ಹ್ಯಾಂಡ್ ( ಸ್ಕಿಲ್ಡ್) : 02
  • ಜೂನಿಯರ್ ಕ್ಯೂಸಿ ಇನ್ಸ್ ಪೆಕ್ಟರ್ ( ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ ) : 05
  • ಜೂನಿಯರ್ ಕ್ಯೂಸಿ ಇನ್ಸ್ ಪೆಕ್ಟರ್ ( ಮೆಕ್ಯಾನಿಕಲ್ ) : 45
  • ಜೂನಿಯರ್ ಕ್ಯೂಸಿ ಇನ್ಸ್ ಪೆಕ್ಟರ್ ( ಎನ್ ಡಿಟಿ) : 04
  • ಪ್ಲಾನರ್ ಎಸ್ಟಿಮೇಟರ್ : 11
  • ಜೂನಿಯರ್ ಡ್ರಾಟ್ಸ್ ಮನ್ ( ಮೆಕ್ಯಾನಿಕಲ್) : 42
    ಸ್ಟೋರ್ಸ್ ಕೀಪರ್ : 43

ಸೆಮಿ ಸ್ಕಿಲ್ಡ್ ಐಡಿ – II ಹುದ್ದೆಗಳು

ಸೇಲ್ ಮೇಕರ್ : 04
ಯುಟಿಲಿಟಿ ಹ್ಯಾಂಡ್ ( ಸೆಮಿ ಸ್ಕಿಲ್ಡ್ ) : 100
ಫಯರ್ ಫೈಟರ್ : 45
ಸೇಫ್ಟಿ ಇನ್ಸ್ ಪೆಕ್ಟರ್ : 06
ಸೆಕ್ಯುರಿಟಿ ಸಿಪಾಯಿ : 04

ಸೆಮಿ ಸ್ಕಿಲ್ಡ್ ಐಡಿ- III ( ID- VIA) ಹುದ್ದೆಗಳು

ಲಾಂಚ್ ಡೆಕ್ ಕ್ರಿವ್ : 24
ಸ್ಪೆಷಲ್ ಗ್ರೇಡ್ ( ID- VIII) ಹುದ್ದೆಗಳು
ಲಾಂಚ್ ಎಂಜಿನ್ ಕ್ರಿವ್ / ಮಾಸ್ಟರ್ II ಕ್ಲಾಸ್ : 01

ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅನುಸಾರವಾಗಿ ಐಟಿಐ/ ಡಿಪ್ಲೋಮಾ/ ಬಿಇ ಪಾಸ್ ಮಾಡಿರಬೇಕು. ನೇಮಕ ಪ್ರಾಧಿಕಾರ ನೋಟಿಫಿಕೇಶನ್ ನಲ್ಲಿ ತಿಳಿಸಲಾದ ಡಿಟೇಲ್ಡ್ ಅರ್ಹತೆಗಳನ್ನು ಓದಿ ಅರ್ಜಿ ಸಲ್ಲಿಸುವುದು.

ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ/ಇಡ್ಬ್ಲ್ಯುಸಿ ಅಭ್ಯರ್ಥಿಗಳಿಗೆ : 100 ರೂ. ಎಸ್ಸಿ/ ಎಸ್ಟಿ / ಪಿಡ್ಬ್ಲುಡಿ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ.

ಅಭ್ಯರ್ಥಿಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಭೀಮ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಆಗಿರಬೇಕು. ಹಾಗೂ ಗರಿಷ್ಠ 38 ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ‌ನೀಡಲಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ

Leave A Reply

Your email address will not be published.