ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ| ಭಾರತದಲ್ಲಿ ಹೊಸ ಕಚೇರಿ ನಿರ್ಮಿಸಲಿರುವ ಗೂಗಲ್ | ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯ|
ಕೆಲಸದ ಆಕಾಂಕ್ಷಿಗಳಿಗೆ ಇಲ್ಲಿದೆ ಸಿಹಿಸುದ್ದಿ. ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಭರ್ಜರಿ ಸಿಹಿ ಸುದ್ದಿ. ಹೌದು ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಈ ಕಚೇರಿ ಸ್ಥಾಪಿಸಲಾಗುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ ಗೂಗಲ್ ತನ್ನ ಹೊಸ ಕಚೇರಿಯನ್ನು ತೆರೆಯುತ್ತದೆ.
ಹೊಸ ನೇಮಕಾತಿಗಳ ಪ್ರಕ್ರಿಯೆಯು ಗೂಗಲ್ ನ ಗುರುಗ್ರಾಮ, ಹೈದರಬಾದ್ ಮತ್ತು ಬೆಂಗಳೂರು ಕಚೇರಿಯಲ್ಲಿ ನಡೆಯುತ್ತಿದೆ. ಸುಧಾರಿತ ಕ್ಲೌಡ್ ತಂತ್ರಜ್ಞಾನಕ್ಕಾಗಿ ಗೂಗಲ್ ಈ ಹೊಸ ನೇಮಕಾತಿಯನ್ನು ಮಾಡುತ್ತಿದೆ.
ಭಾರತವು ಗೂಗಲ್ ಗೆ ಉತ್ತಮ ಸ್ಥಳವಾಗಿದೆ. ಗೂಗಲ್ ಕ್ಲೌಡ್ ಗೆ ಅಗತ್ಯವಿರುವ ಟ್ಯಲೆಂಟ್ ಭಾರತದಲ್ಲಿದೆ ಎಂದು ಭಾರತದ ಗೂಗಲ್ ಕ್ಲೌಡ್ ಇಂಜಿನಿಯರಿಂಗ್ ವಿಪಿ ಅನಿಲ್ ಬನ್ಸಾಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಈ ಕೆಲಸಕ್ಕೆ ಆಯ್ಕೆಯಾದರೆ ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯಗಳನ್ನು ಅಭ್ಯರ್ಥಿಗಳು ಪಡೆಯಬಹುದು.