ಕಡಬ:ತಾಲೂಕು ಮಟ್ಟದ ಗಣರಾಜ್ಯೋತ್ಸವ!! ತಹಶೀಲ್ದಾರ್ ಅನಂತ ಶಂಕರ್ ರಿಂದ ಧ್ವಜಾರೋಹಣ-ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಸಿಬ್ಬಂದಿಗಳಿಂದ ಕವಾಯತು

ಕಡಬ : 73 ನೇ ವರ್ಷದ ಗಣರಾಜ್ಯೋತ್ಸವವನ್ನು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಕಡಬ ತಾಲೂಕು ಆವರಣದಲ್ಲಿ ಆಚರಿಸಲಾಯಿತು.

‘ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ನಮ್ಮ‌ ಭಾರತದ ಸಂವಿಧಾನವು ಪರಮಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯರು ಹಾಕಿದ ನೀತಿ ನಿರೂಪಣೆಯನ್ನು ಮನನ ಮಾಡಿಕೊಳ್ಳುವ ದಿನವಾಗಿ ಈ ಸಂಭ್ರಮವನ್ನು ಆಚರಿಸಬೇಕು. ಸಕಾರಾತ್ಮಕ ಉತ್ತರಗಳನ್ನು ನಮ್ಮೆಲ್ಲ ಪ್ರಶ್ನೆಗಳಿಗೆ ಕಂಡುಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸೋಣ ಎಂದು ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ಕಡಬ ತಹಶೀಲ್ದಾರ್ ಅನಂತ ಶಂಕರ್ ಹೇಳಿದರು.

ಎಲ್ಲರೂ ಧ್ವಜವಂದನೆ ಸಲ್ಲಿಸಿದರು. ಕಡಬ ಠಾಣಾ ಎಸ್ ಐ ರುಕ್ಮಯ್ಯ ನಾಯ್ಕ ಮತ್ತು ಸಿಬ್ಬಂದಿಗಳು ಕವಾಯತು ನಡೆಸಿದರು. ಉಪತಹಶೀಲ್ದಾರ್ ಕೆ ಟಿ ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕಡಬ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Leave A Reply

Your email address will not be published.