ಸುಳ್ಯ: ತಂದೆ ಮಗನ ನಡುವೆ ನಡೆದ ಜಗಳ!! ತಂದೆಯಿಂದಲೇ ಮಗನ ಎದೆಗೆ ಬಿತ್ತು ಕತ್ತಿಯೇಟು

Share the Article

ಸುಳ್ಯ: ತಂದೆ ಮತ್ತು ಮಗನ ನಡುವೆ ಮಾತು ಬೆಳೆದು, ಮಾತಿನ ಚಕಮಕಿ ಕೊಲೆಯ ಮಟ್ಟಕ್ಕೆ ಬೆಳೆದಿದ್ದು, ತಂದೆಯೇ ಮಗನ ಎದೆಗೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದ್ದು, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ವ್ಯಕ್ತಿಯನ್ನು ಐತ್ತಪ್ಪ ನಾಯ್ಕ್ ಎಂದು ಗುರುತಿಸಲಾಗಿದ್ದು,ತಂದೆ ಮಗನ ನಡುವೆ ಜಗಳ ನಡೆದಿದ್ದು, ಜಗಳವು ತಾರಕಕ್ಕೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಜಯಪ್ರಕಾಶ್ ನನ್ನು ಸಂಬಂಧಿಯೊಬ್ಬರು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Leave A Reply