ಅಡುಗೆ ಎಣ್ಣೆ ಬೆಲೆ ‘ಶೇ.15’ರಷ್ಟು ಇಳಿಕೆ| ತಮ್ಮ ಉತ್ಪನ್ನಗಳ ಬೆಲೆ ಕಡಿಮೆ ಮಾಡುವ ಮೂಲಕ ಗ್ರಾಹಕರ ಮೊಗದಲ್ಲಿ ನಗು ತರಿಸಿದ ಈ ಪ್ರಮುಖ ಕಂಪನಿಗಳು
ನವದೆಹಲಿ :ಹಬ್ಬ, ಕಾರ್ಯಕ್ರಮಗಳ ಸಮಯವಾದ್ದರಿಂದ ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ.
ಅಡುಗೆ ತೈಲಗಳ ಉತ್ಪಾದನೆ ಮತ್ತು ಸರಬರಾಜು ಆಯೋಗವು (SEA) ಎಮರ್ಪಿಯಲ್ಲಿ ಶೇಕಡಾ 10-15 ರಷ್ಟು ಬೆಲೆಯನ್ನ ಕಡಿಮೆ ಮಾಡಿದೆ ಎಂದು ಹೇಳಿದೆ.ಪ್ರಮುಖ ಕಂಪನಿಗಳಾದ ಅದಾನಿ ವಿಲ್ಮರ್ ಮತ್ತು ಫ್ಲೇವರ್ಡ್ ಸೋಯಾ ತಮ್ಮ ಉತ್ಪನ್ನಗಳ ಬೆಲೆಯನ್ನು ಶೇಕಡಾ 15ರಷ್ಟು ಕಡಿಮೆ ಮಾಡಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ.
ಅಡುಗೆ ಎಣ್ಣೆಯನ್ನು ಪೂರೈಸುವ ನಮ್ಮ ಪ್ರಮುಖ ಸದಸ್ಯರು ಎಮ್ಮಾರ್ಫಿಯನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಲು ನಾವು ಸಂತೋಷಪಡುತ್ತೇವೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಪರಿಹಾರ ನೀಡಲು ನಾವು ಬೆಲೆಯನ್ನು ಶೇಕಡಾ 10-15 ರಷ್ಟು ಕಡಿಮೆ ಮಾಡಿದ್ದೇವೆ ಎಂದು ಎಸ್‌ಇಎ ತಿಳಿಸಿದೆ.ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನ ಸರ್ಕಾರ ಶೇ.17.5ರಿಂದ ಶೇ.12.5ಕ್ಕೆ ಇಳಿಸಿದೆ. ಅಂತರಾಷ್ಟ್ರೀಯ ತೈಲ ಬೆಲೆಗಳು ಏರುತ್ತಿರುವುದು ಗ್ರಾಹಕರು ಮತ್ತು ದೇಶದ ಆಡಳಿತಗಾರರನ್ನ ಘಾಸಿಗೊಳಿಸಿದೆ ಎಂದು SEA ಹೇಳಿದೆ. ಇನ್ನು ಈ ಹೊರೆಯನ್ನ ಕಡಿಮೆ ಮಾಡಲು ಸರ್ಕಾರವು ಸಂಸ್ಕರಿಸಿದ, ಕಚ್ಚಾ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನ ಹಲವಾರು ಬಾರಿ ಕಡಿತಗೊಳಿಸಿರುವುದನ್ನ ಸ್ಮರಿಸಲಾಗಿದೆ.
ಅದಾನಿ ವಿಲ್ಮರ್, ಫ್ಲೇವರ್ಡ್ ಸೋಯಾ, ಇಮಾಮಿ, ಜೆಮಿನಿ, ಫ್ರಿಗೊರಿಫಿಕೊ ಅಲಾನಾ, ಕೊಫ್ಕೊ, ಗೋಕುಲ್ ಆಗ್ರೋ ಮುಂತಾದ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನ ಕಡಿಮೆ ಮಾಡಿ ಗ್ರಾಹಕರ ಮೊಗದಲ್ಲಿ ನಗು ತರಿಸಿದೆ.