ಸಾಲೆತ್ತೂರು: ಕೊರಗಜ್ಜನ ವೇಷಧರಿಸಿ ಅವಹೇಳನ ನಡೆಸಿದ್ದ ವರನ ಮಂಜೇಶ್ವರದ ಮನೆಗೆ ಕಿಡಿಗೇಡಿಗಳಿಂದ ದಾಳಿ!! ಕಿಟಕಿ ಹಾಗೂ ಗೇಟ್ ಗೆ ಹಾನಿ-ಪೊಲೀಸರಿಗೆ ದೂರು

ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ನಡೆಸಿದ ಮದುಮಗನ ಮಂಜೇಶ್ವರದಲ್ಲಿರುವ ಮನೆಗೆ ಕಿಡಿಗೇಡಿಗಳು ದಾಳಿ ನಡೆಸಿದ್ದು,ಘಟನೆಯಿಂದಾಗಿ ಮನೆಗೆ ಹಾನಿಯಾಗಿದೆ.

 

ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದ್ದು,ಮಂಜೇಶ್ವರದಲ್ಲಿರುವ ವರನ ಮನೆಯ ಗೇಟ್ ಗೆ ಕಾವಿ ಬಣ್ಣ ಬಳಿದು,ಮನೆಯ ಕಿಟಕಿಗೆ ಕಲ್ಲೆಸೆದು ಹಾನಿಗೈಯ್ಯಲಾಗಿದೆ.

ಕಿಡಿಗೇಡಿಗಳ ಕೃತ್ಯವನ್ನು ಕಂಡ ಮನೆಮಂದಿ ಗಾಬರಿಯಿಂದ ಬೊಬ್ಬೆ ಹೊಡೆದಾಗ ಪರಾರಿಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ.

Leave A Reply

Your email address will not be published.