ಪ್ರಧಾನಿ ಭದ್ರತೆ ವೈಫಲ್ಯ ಪ್ರಕರಣದ ಹಿಂದಿದೆ ಖಲಿಸ್ತಾನಿ ಕರಿನೆರಳು!! ಸುಪ್ರೀಂ ಕೋರ್ಟ್ ವಕೀಲರಿಗೆ ಬರುತ್ತಿದೆ ಬೆದರಿಕೆ ಕರೆ-ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದೆ ಕೆಲ ಸುಳ್ಳು ಸುದ್ದಿ
ಪಂಜಾಬ್:ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದ ಕಾರ್ಯಕ್ರಮವೊಂದಕ್ಕೆ ರಸ್ತೆಯಲ್ಲಿ ತೆರಳುವ ಸಂದರ್ಭ ಪ್ರತಿಭಟನಾಕಾರರು ಅಡ್ಡಿಪಡಿಸಿದಲ್ಲದೇ, ಪ್ರಧಾನಿಯನ್ನು ಫ್ಲೈ ಓವರ್ ಮೇಲೆಯೇ ನಿಲ್ಲಿಸಿ ದೇಶದ ಪ್ರಧಾನಿಗೇ ಭದ್ರತೆ ನೀಡುವಲ್ಲಿ ವಿಫಲರಾದ ಪಂಜಾಬ್ ಸರ್ಕಾರಕ್ಕೆ ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದೊಂದು ಫೋಟೋ ಜನರ ಯೋಚನೆಗಳ ದಾರಿ ತಪ್ಪಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಲ್ಲಿ ಕಾಣುವ ಈ ಫೋಟೋದಲ್ಲಿ ಕಾಲು ಗಂಟೆ ಹೊತ್ತು ಫ್ಲೈ ಓವರ್ ಮೇಲೆ ಸಿಕ್ಕಿಹಾಕಿಕೊಂಡಿದ್ದ ಪ್ರಧಾನಿಯ ಕೊಲೆಗೆ ಸ್ಕೆಚ್ ನಡೆದಿತ್ತು ಎನ್ನಲಾಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಸುಪ್ರೀಂ ಕೋರ್ಟ್ ನ ಕೆಲ ವಕೀಲರಿಗೆ ಖಲಿಸ್ತಾನಿಗಳ ಬೆದರಿಕೆ ಕರೆಗಳು ಕೂಡಾ ಬರುತ್ತಿವೆಯಂತೆ. ಈ ವರೆಗೂ 1000 ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆಯೆಂದು ವಕೀಲರು ಸ್ಪಷ್ಟಪಡಿಸಿದ್ದಾರೆ.ಅದಲ್ಲದೇ ಎಲ್ಲೆಡೆ ಹರಿದಾಡುತ್ತಿರುವ ಫೋಟೋ ದಲ್ಲಿ ರ್ಯಾಲಿ ನಡೆಯುವ ಸಂದರ್ಭ ಅಲ್ಲಿ ನಿಂತಿದ್ದ ಲಾರಿಯೊಂದನ್ನು ಮಾರ್ಕ್ ಮಾಡಿ, ಎಸ್.ಜಿ.ಪಿ ಸಿಬ್ಬಂದಿಯು ಅಸಾಲ್ಟ್ 2000 ನೊಂದಿಗೆ ಬಾರದೇ ಇರುತ್ತಿದ್ದರೆ ಪ್ರಧಾನಿ ಕಾರನ್ನು ಈ ವಾಹನ ಗುದ್ದಿಕೊಂಡು ಹೋಗುತ್ತಿತ್ತು, ಪ್ರತಿಭಟನೆಯ ಸಂದರ್ಭ ಒಬ್ಬ ಸಾಮಾನ್ಯ ಮನುಷ್ಯ ತೆರಳಲು ಆಗದ ರಸ್ತೆಯಲ್ಲಿ ಈ ಲಾರಿ ಬಂದಿರುವುದು ಹೇಗೆ!? ಇದೆಲ್ಲವೂ ಕಾಂಗ್ರೆಸ್ ನ ಕೈವಾಡ ಎಂದು ಹೇಳಲಾಗುತ್ತಿದೆ.
ಇತ್ತ ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದ ಪ್ರಧಾನಿ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ರಸ್ತೆ ಮೂಲಕ ಚಲಿಸಿದ್ದು ಪ್ರಧಾನಿಯವರ ಬೆಂಗಾವಲು ಪಡೆಯ ವಾಹನ ಕ್ಲಿಯರ್ ಇಲ್ಲದ ರಸ್ತೆಯಲ್ಲಿ ಚಲಿಸಿ ಇಂತಹ ಘಟನೆ ನಡೆದಿದೆ.
ಅಷ್ಟಕ್ಕೂ ಪ್ರಧಾನಿ ರಸ್ತೆ ಮೂಲಕ ಬರುವ ಮಾಹಿತಿ ನೀಡಿದವರು ಯಾರು ಎಂಬುವುದು ಇಲ್ಲಿ ಎಲ್ಲರನ್ನೂ ಕಾಡಿದ ಪ್ರಶ್ನೆಯಾದರೆ,ಪ್ರಧಾನಿ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಪ್ರತಿಭಟನಾಕಾರರಲ್ಲಿ ಈಗಾಗಲೇ 20 ಜನರನ್ನು ಬಂಧಿಸಲಾಗಿದ್ದು,ಪ್ರತಿಭಟನೆ ನಡೆಸಿದವರು ಬಿಜೆಪಿ ಬೆಂಬಲಿಗರು ಎಂದು ಆರೋಪಿಸಲಾಗಿದೆ.
ಇಡೀ ಪ್ರಕರಣದ ಇನ್ನೊಂದು ಸತ್ಯ ಏನೆಂದರೆ,ಪ್ರಧಾನಿ ಫ್ಲೈ ಓವರ್ ಮೇಲೆ ನಿಂತಿದ್ದಾಗ ಅಲ್ಲಿ ಯಾವ ಲಾರಿಯೂ ಇರಲಿಲ್ಲ, ಅಲ್ಲಿದ್ದುದು ಕೇವಲ ಮಿನಿ ಬಸ್, ಹಾಗೂ ಪ್ರಧಾನಿ ಕಾರಿಗೆ ಗುದ್ದುವ-ಅಥವಾ ಗುದ್ದುತ್ತಿತ್ತು ಎಂದು ಈ ವರೆಗೂ ಯಾವ ಮಾಧ್ಯಮವೂ ಸುದ್ದಿ ಬಿತ್ತರಿಸಲಿಲ್ಲ.ಒಟ್ಟಾರೆಯಾಗಿ ಏನೇ ವಿಷಯ ಇದ್ದರೂ ಕೆಲ ಒಂದೇ ಪಕ್ಷದ ಅಥವಾ ಒಂದೇ ಬಣಕ್ಕೆ ಹೊಂದಿಕೊಂಡಿರುವ ಬಲಪಂಥಿಯರು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ಕಿಡಿಹಚ್ಚಲು ಪ್ರಯತ್ನಿಸುತ್ತಾರೆ.