ಜನಸಾಮಾನ್ಯರಿಗೊಂದು ನ್ಯಾಯ-ಸರ್ಕಾರಕ್ಕೊಂದು ನ್ಯಾಯ!! ರಾಜ್ಯದ ಜನತೆಯನ್ನು ಕರ್ಫ್ಯೂ ವಿಧಿಸಿ ನಿಯಮ ಪಾಲಿಸಲು ಸೂಚಿಸಿದ ಸರ್ಕಾರ ಮಾತ್ರ ಎಲ್ಲವನ್ನೂ ಗಾಳಿಗೆ ತೂರಿದಂತಿದೆ!??
ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಿ ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ತಮ್ಮ ಪಕ್ಷದ ಕಾರ್ಯಕಾರಿಣಿ ಸಭೆಯ ದೂರಿನಲ್ಲಿ ಜಾತ್ರೆ ನಡೆಸಲು ಮುಂದಾಗಿದೆ ಎಂದು ರಾಜ್ಯದ ಜನತೆ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಎರಡು ವರ್ಷಗಳಿಂದ ವ್ಯಾಪಾರ ವಹಿವಾಟುಗಳು ಸಂಪೂರ್ಣ ಕುಂಠಿತವಾಗಿತ್ತು.ಈ ಬಾರಿ ವಹಿವಾಟುಗಳು ಕೊಂಚ ಪ್ರಗತಿ ಕಾಣುವಾಗಲೇ ಸರ್ಕಾರ ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿರುವುದು ವಿಪರ್ಯಾಸ.
ಪಬ್, ಬಾರ್, ಹೋಮ್ ಸ್ಟೇ ಗಳು ಈ ಬಾರಿಯ ಹೊಸವರ್ಷದ ಸಂಭ್ರಮಕ್ಕೆ ಬುಕಿಂಗ್ ಆಗಿದ್ದವು, ಅದಲ್ಲದೇ ಗ್ರಾಹಕರಿಂದ ಅಡ್ವಾನ್ಸ್ ಕೂಡಾ ಪಡೆದುಕೊಂಡು ತಮ್ಮ ಕೆಲಸಗಾರರ ಬಾಕಿ ಸಂಬಳದ ಮೊತ್ತವನ್ನು ಪಾವತಿಸಲು, ಹೊಸ ವರ್ಷದ ಸೆಲೆಬ್ರೇಶನ್ ಗೆ ಬೇಕಾದ ಸಿದ್ಧತೆಗೆ ಖರ್ಚು ಮಾಡಿದ್ದವು. ಆದರೆ ಈಗ ಸರ್ಕಾರದ ಈ ನಿರ್ಧಾರದಿಂದಾಗಿ ಕೈಕಟ್ಟಿದಂತಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ದುಡಿಮೆ ಮಾಡುವ ಸ್ಥಳದಲ್ಲಿ, ವ್ಯಾಪಾರ ಕೇಂದ್ರಗಳಲ್ಲಿ ಮಾತ್ರವೇ ವೈರಸ್ ಹರಡುವುದು, ಅಲ್ಲದೇ ಬಿಜೆಪಿ ನಡೆಸುವ ಜಾತ್ರೆ ಯಲ್ಲಿ ಯಾವುದೇ ರೂಪಾಂತರಿ ಹರಡುವುದಿಲ್ಲ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಕಠಿಣ ರೂಲ್ಸ್ ಗಳನ್ನು ತಂದು ಜನಸಾಮಾನ್ಯರ ಹೊಟ್ಟೆಗೆ ಬಡಿಯುವಂತ ಕೆಲಸಕ್ಕೆ ಇಳಿದಿದ್ದು, ತಾನು ಮಾತ್ರ ಕಾರ್ಯಕಾರಿಣಿ ಹೆಸರಲ್ಲಿ ಎಂಜಾಯ್ ಮಾಡುತ್ತಿದೆ ಎಂಬುವುದು ಜನಸಾಮಾನ್ಯರ ವಾದ.