ನಾಳೆ ಕಾರಿಂಜ ಕ್ಷೇತ್ರದಲ್ಲಿ ತಪೋನಿಧಿ ಬಾಬಾ ವಿಠಲ್ ಗಿರಿ ಮಹಾರಾಜ್ ರಿಗೆ ಭಕ್ತಮಹನೀಯರಿಂದ ಗುರುವಂದನೆ!! ಗುರುವರ್ಯರಿಗೆ ಗುರುವಂದನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸಾವಿರ ಸಾವಿರ ಭಕ್ತ ಸಮೂಹ
ನಾಳೆ 27 ರಂದು ನಾಗಸಾಧು ಬಾಬಾ ವಿಠಲ್ ಗಿರಿ ಮಹಾರಾಜ್ ಅವರಿಗೆ ಕಾರಿಂಜ ದೇವಾಲಯದಲ್ಲಿ ನಾಗಸಾಧು ಭಕ್ತವೃಂದ ಮಂಗಳೂರು-ಉಡುಪಿ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ತನ್ನ ಬಾಲ್ಯದಿಂದಲೇ ರಾಷ್ಟೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡು, ಹಿಂದೂ ಧರ್ಮ-ಸಮಾಜ ರಕ್ಷಣೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ವಿಠಲ್ ಗಿರಿ ಮಹಾರಾಜ್, ಹಲವಾರು ವರ್ಷಗಳಿಂದ ನಾಗಸಾಧುಗಳ ತಪೋ ಭೂಮಿ ಹರಿದ್ವಾರ-ಕೇದಾರನಾಥ ದಲ್ಲಿ ಹಿರಿಯ ನಾಗಸಾಧುಗಳಿಂದ ಧೀಕ್ಷೆ ಪಡೆದಿದ್ದರು.
ಕಾರಿಂಜ ರುದ್ರಗಿರಿಗೆ ಅಕ್ರಮ ಗಾಣಿಗಾರಿಕೆಯಿಂದ ಅಪಾಯವಾಗುತ್ತಿದೆ ಎಂದರಿತು, ಹರಿದ್ವಾರ ದಿಂದ ಮೊನ್ನೆಯ ದಿನ ಬಂದಿದ್ದ ವಿಠಲ್ ಗಿರಿ ಮಹಾರಾಜ್ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳ ನಡೆದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು. ಅನ್ನ ನೀಡಿದ ಭೂಮಿಗೆ ಅನ್ಯಾಯವಾಗುತ್ತಿದೆ ಎಂದರೆ ಗಂಭೀರ ವಿಚಾರ, ಆ ಭೂಮಿಯನ್ನು ಯಾವ ರೀತಿ ರಕ್ಷಿಸಿಕೊಳ್ಳಬೇಕು ಎಂಬುವುದು ನಮಗೆ ಚೆನ್ನಾಗಿ ಅರಿತಿದೆ, ಜಿಲ್ಲಾಡಳಿತ ತಮ್ಮ ನಿಲುವನ್ನು ಬದಲಿಸದಿದ್ದರೆ ನಾಗಸಾಧುಗಳ ಸಮೂಹವೇ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ನಾಳೆಯ ದಿನ ಬಾಬಾ ವಿಠಲ್ ಗಿರಿ ಮಹಾರಾಜ್ ರಿಗೆ ಭಕ್ತ ಬಾಂಧವರಿಂದ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ನಾಗಸಾಧುವಾಗಿ ಧೀಕ್ಷೆ ಪಡೆದು ಇದೇ ಮೊದಲಬಾರಿಗೆ ಹುಟ್ಟೂರಿಗೆ ಆಗಮಿಸಿದ ವಿಠಲ್ ಗಿರಿ ಮಹಾರಾಜ್ ರಿಗೆ ಹತ್ತೂರ ಮಹನೀಯರಿಂದ ನಡೆಯುವ ಗೌರವದ ಗುರುವಂದನೆ ಕಾರ್ಯಕ್ರಮಕ್ಕೆ ಕಾರ್ಯಕ್ರಮ ಆಯೋಜಕರು ತಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.