ಮಂಗಳೂರು: ಮತ್ತೆ ವೈರಸ್ ಭೀತಿ-ಬೀದಿ ಬದಿಯ ಸಹಿತ ಸಾಕು ಶ್ವಾನಗಳಲ್ಲಿ ಕಂಡು ಬಂದ ಕ್ಯಾನೈನ್ ಡಿಸ್ಟೆಂಪರ್!! ಬೀದಿ ಬದಿಯ ಶ್ವಾನಗಳ ಸ್ನೇಹ ಬೆಳೆಸಿಕೊಳ್ಳುವ ಮುನ್ನ ಎಚ್ಚರ!?
ಮಂಗಳೂರು: ನಗರಕ್ಕೆ ಅಂಟಿದ್ದ ಮಹಾಮಾರಿಯ ಪ್ರಭಾವ ಕೊಂಚ ಕಡಿಮೆಯಾಗುತ್ತಿದ್ದಂತೆ ಶ್ವಾನಗಳಲ್ಲಿ ವೈರಸ್ ಭೀತಿ ಶುರುವಾಗಿದೆ.ನಗರದ ಸುತ್ತಮುತ್ತಲಿನ ಶ್ವಾನಗಳಲ್ಲಿ ಹೊಸ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಒಂದು ನಾಯಿಯಿಂದ ಇನ್ನೊಂದು ನಾಯಿಗೆ ಹರಡುವ ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾನೈನ್ ಡಿಸ್ಟೆಂಪರ್ ಎಂದು ಕರೆಯಲಾಗುವ ವೈರಸ್ ನ್ನು ಮೊದಲ ಹಂತದಲ್ಲಿಯೇ ಲಸಿಕೆ ನೀಡಿ ಹತೋಟಿಗೆ ತರಲಾಗುತ್ತಿದೆ. ಅತೀ ಹೆಚ್ಚು ವೇಗವಾಗಿ ಹರಡಬಲ್ಲ ಮಾರಕ ಶೇ 25ರಷ್ಟು ಶ್ವಾನಗಳಲ್ಲಿ ಈಗಾಗಲೇ ಕಂಡುಬಂದಿದೆ.
ಮನೆಯಲ್ಲಿ ಸಾಕುವ ನಾಯಿಗಳಿಗೆ ಲಸಿಕೆ ಹಾಕಿ ಹತೋಟಿಗೆ ತರಲಾಗುತ್ತಿದೆಯಾದರೂ ಬೀದಿಬದಿಯ ಶ್ವಾನಗಳಿಗೆ ಲಸಿಕೆ ಹಾಕುವುದು ಕೊಂಚ ಕಷ್ಟಕರವಾಗಿದೆ. ಆದರೂ ಈ ಪ್ರಯತ್ನ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಜ್ವರ, ಮೂಗಿನಲ್ಲಿ ಶೀತ ಹಾಗೂ ಕೈಕಾಲು ಪಾರ್ಶ್ಶ್ವ ವಾಯುಗೆ ಒಳಗಾಗುವುದು ಮುಂತಾದ ಲಕ್ಷಣಗಳಾಗಿದ್ದು, ಶ್ವಾನಗಳಲ್ಲಿ ಇಂತಹ ಲಕ್ಷಣ ಕಂಡುಬಂದರೆ ಕೂಡಲೇ ಪಶುವೈದ್ಯರನ್ನು ಸಂದರ್ಶಸಲು ಇಲಾಖೆ ಒತ್ತಾಯಿಸಿದೆ.