ಮಂಗಳೂರು :ಕೊನೆಗೂ ನ್ಯಾಯಾಲಯಕ್ಕೆ ಹಾಜರಾದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ವಕೀಲ ರಾಜೇಶ್ ಭಟ್!! ಪೊಲೀಸರ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಮೂಲಕ ಬಂದಿದ್ದ ಖತರ್ನಾಕ್
ಮಂಗಳೂರು: ಜಿಲ್ಲೆಯಾದ್ಯಂತ ಹೆಚ್ಚು ಸದ್ದು ಜೊತೆಗೆ ಆಕ್ರೋಶಕ್ಕೆ ಕಾರಣವಾದ ಇಂಟರ್ನ್ ಶಿಪ್ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಸುಮಾರು ಎರಡು ತಿಂಗಳುಗಳಿಂದ ಪೊಲೀಸರನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದ ಖ್ಯಾತ ವಕೀಲ ರಾಜೇಶ್ ಭಟ್ ಇಂದು ಪೊಲೀಸರ ಬಂಧನ ಭೀತಿಯಿಂದ ಆಂಬುಲೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದು,ಆತನ ಜಾಮೀನು ಅರ್ಜಿ ತಿರಸ್ಕೃತವಾಗಿದೆ.
ಘಟನೆ ವಿವರ: ತನ್ನ ಕಚೇರಿಯಲ್ಲಿ ಇಂಟರ್ನ್ ಶಿಪ್ ನಲ್ಲಿದ್ದ ವಿದ್ಯಾರ್ಥಿನಿ ಯುವತಿಯೊರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತ,ತನ್ನ ತಪ್ಪಿನ ಅರಿವಾಗಿ ಯುವತಿಯಲ್ಲಿ ದೂರವಾಣಿ ಕರೆಯ ಮೂಲಕ ಕ್ಷಮೆಯನ್ನು ಕೇಳಿದ್ದ. ಈತನ ವಿರುದ್ಧ ಯುವತಿ ಪೊಲೀಸರ ಮೊರೆ ಹೋಗಿದ್ದು,ಬಂಧನ ವಿಳಂಬವಾಗಿದೆ.ಈ ಬಗ್ಗೆ ಯುವತಿಯ ಪರವಾಗಿ ವಿದ್ಯಾರ್ಥಿ ಪರಿಷತ್ತು ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿತ್ತು.
ಘಟನೆ ನಡೆದು ಎರಡು ತಿಂಗಳುಗಳು ಕಳೆದರೂ ಆರೋಪಿಯ ಬಂಧನಕ್ಕೆ ಪೊಲೀಸರು ಹಲವು ತಂಡಗಳನ್ನು ನಡೆಸಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕೆಲ ದಿನಗಳ ಆರೋಪಿ ಪರಾರಿಯಾಗಲು ಸಹಕಾರ ನೀಡಿದ ಆರೋಪಿ ಹಾಗೂ ರಾಜೇಶ್ ಪತ್ನಿ ಹಾಗೂ ಇನ್ನೊರ್ವನನ್ನು ಬಂಧಿಸಲಾಗಿತ್ತು.
ಯುವತಿಗೆ ಅನ್ಯಾಯ ವೆಸಗಿದ ಆರೋಪಿಯ ಬಂಧನ ವಿಳಂಬವಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಂಗಳೂರು ಕಮಿಷನರ್ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಆರೋಪಿ ಪೊಲೀಸರ ಬಂಧನ ಭೀತಿಯಿಂದ ಆಂಬುಲೆನ್ಸ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದು ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯ ಮುಖ್ಯ ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಲಾಗಿದ್ದು, ಈ ನಡುವೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಪೊಲೀಸರು ತಮ್ಮ ಕಷ್ಟಡಿಗೆ ಕೇಳುವ ಸಾಧ್ಯತೆಯಿದೆ.
ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?