ವಿಟ್ಲ: ಪತಿಯ ಮೇಲೆ ಮುನಿಸಿಕೊಂಡು ತವರು ಸೇರಿದ್ದ ಪತ್ನಿ!! ಆಕೆಯ ಮೇಲಿನ ಕೋಪಕ್ಕೆ ಪತಿ ತೆಗೆದುಕೊಂಡ ನಿರ್ಧಾರ!??

Share the Article

ಪತಿ ಪತ್ನಿಯ ಜಗಳ ಸಂಬಂಧ ಪತಿಯೊಂದಿಗೆ ಮುನಿಸಿಕೊಂಡು ತವರು ಸೇರಿದ್ದ ಪತ್ನಿಗೆ ಜೀವ ಬೆದರಿಕೆ ಒಡ್ಡಿದ್ದಲ್ಲದೇ, ತವರು ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಭಂಡ ಗಂಡನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಗೌಸ್ ಜಲಾಲುದ್ದಿನ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ವಿಟ್ಲ ಅರೀಪೆಕಟ್ಟೆ ನಿವಾಸಿ ಮಹಿಳೆ ಫಾತಿಮತ್ ಬುಶ್ರಾ ಎಂಬಾಕೆಯನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದೀನ್ ಕಳೆದ ಕೆಲವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ ಪತಿ ಪತ್ನಿಯ ನಡುವೆ ಅದ್ಯಾವ ಕಾರಣಕ್ಕೋ ಮನಸ್ತಾಪ ಉಂಟಾಗಿ ಕೆಲ ತಿಂಗಳುಗಳ ಹಿಂದೆ ಮಹಿಳೆ ತನ್ನ ತವರು ಮನೆ ಸೇರಿದ್ದಳು.

ಇದರಿಂದ ಕುಪಿತಗೊಂಡ ಆರೋಪಿ ಆಕೆಯ ತವರು ಮನೆಗೆ ಬಂದು ಗದ್ದಲ ನಡೆಸಿದಲ್ಲದೇ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೂ ಮುಂದಾಗಿದ್ದ. ಬಂದ ದಾರಿಗೆ ಏನಾದರೊಂದು ಮಾಡಿ ಹೋಗಬೇಕೆಂದುಕೊಂಡು ಮನೆಯ ಸೋಫಾ ಕ್ಕೇ ಬೆಂಕಿ ಇರಿಸಿದ್ದ. ಬೆಂಕಿಯು ಹೊತ್ತಿ ಮನೆಯಲ್ಲಿನ ಆಹಾರ ಧಾನ್ಯಗಳ ಸಹಿತ ಇತರ ವಸ್ತುಗಳು ಆಹುತಿಯಾಗಿದ್ದಲ್ಲದೇ, ಈತನ ಹಲ್ಲೆಯಿಂದಾಗಿ ಮಹಿಳೆಯೂ ಗಾಯಗೊಂಡಿದ್ದರು. ಸದ್ಯ ಮಹಿಳೆಯ ದೂರಿನ ಮೇರೆಗೆ ವಿಟ್ಲ ಪೊಲೀಸರು ಆರೋಪಿಯ ಹೆಡೆಮುರಿಕಟ್ಟಿದ್ದಾರೆ.

Leave A Reply