ಮಂಗಳೂರು: ಬಸ್ಸಿನಲ್ಲಿ ಭಿನ್ನ ಕೋಮಿನ ಯುವಕ ಯುವತಿ ಪತ್ತೆ ಪ್ರಕರಣ!! ಸುಮೋಟೋ ಅಡಿಯಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ಜಾಮೀನು-ಜೈಲಿನಿಂದ ಬಿಡುಗಡೆ
ಮಂಗಳೂರು: ಕೆಲ ದಿನಗಳ ಹಿಂದೆ ಬಸ್ಸಿನಲ್ಲಿ ಪರಸ್ಪರ ಚುಂಬಿಸಿದ ಭಿನ್ನ ಕೋಮಿನ ಯುವಕ ಯುವತಿಯನ್ನು ತರಾಟೆಗೆ ತೆಗೆದುಕೊಂಡು,ಸಾಮಾಜಿಕ ಜಾಲತಾಣಗಲ್ಲಿ ಫೋಟೋ ಸಹಿತ ವೀಡಿಯೋ ಹರಿಯಬಿಟ್ಟು ದೌರ್ಜನ್ಯ ವೆಸಗಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಂದ ಸುಮೊಟೊ ಕೇಸ್ ನಡಿಯಲ್ಲಿ ಬಂಧಿಸಿತರಾಗಿದ್ದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಘಟನೆ ವಿವರ: ಡಿಸೆಂಬರ್ 11 ರಂದು ಮಂಗಳೂರಿನಿಂದ ಉಡುಪಿಗೆ ತೆರಳುವ ಬಸ್ಸಿನಲ್ಲಿದ್ದ ನಗರದ ಕಾಲೇಜೊಂದರ ವಿದ್ಯಾರ್ಥಿಗಳಾದ ಭಿನ್ನ ಕೋಮಿನ ಯುವಕ ಯುವತಿಯನ್ನು ಉಡುಪಿಯ ಬಸ್ಸು ನಿಲ್ದಾಣದಲ್ಲಿ ಅಡ್ಡ ಹಾಕಿ ಗದರಿಸಿ, ಬಳಿಕ ಇಬ್ಬರ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.
ಇದಾದ ಬಳಿಕ ಮಂಗಳೂರು ಪೊಲೀಸರು ಇನ್ನೆರಡು ವೀಡಿಯೋಗಳನ್ನು ಪರಿಶೀಲಿಸಿದಾಗ ಘಟನೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಲ್ಲಿ ನಡೆದಿದೆ ಎಂದು ತಿಳಿದಿದೆ. ಕೂಡಲೇ ಮಂಗಳೂರಿನ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.
ಅದರಂತೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಪ್ರಕಾಶ್, ರಾಘವೇಂದ್ರ, ರಂಜಿತ್, ಹಾಗೂ ಪವನ್ ಎಂಬವರನ್ನು ಐಪಿಸಿ 153 ಹಾಗೂ 354ರಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು.
ಆರೋಪಿಗಳ ಬಂಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಕಮಿಷನರ್ ಸಹಿತ ಬಿಜೆಪಿ ರಾಜ್ಯಾಧ್ಯಕ್ಷ, ಜಿಲ್ಲೆಯ ಶಾಸಕರನ್ನು ಟೀಕಿಸಲಾಗಿತ್ತು.ಹಿಂದೂ ಕಾರ್ಯಕರ್ತರು ಜೈಲಿಗೆ ಹೋದಾಗ ಯಾರೂ ಬರುವುದಿಲ್ಲ, ನಮ್ಮ ನಾಯಕರು ಕೈಗೆ ಬಳೆ ಹಾಕಿಕೊಳ್ಳಲಿ ಎಂಬಂತೆಲ್ಲಾ ಆಕ್ರೋಶ ವ್ಯಕ್ತವಾಗಿತ್ತು.
ಸದ್ಯ ಬೆಂಗಳೂರಿನ ದೇಶಭಕ್ತ ಸಂಘಟನೆಯ ಭರತ್ ಶೆಟ್ಟಿ ನೇತೃತ್ವದಲ್ಲಿ ಪ್ರದೀಪ್ ಬಜಿಲಕೇರಿ, ಪುನೀತ್ ಪಂಪ್ ವೆಲ್, ಮಹೇಶ್ ಸಂತೋಷ್ ನಗರ ಹಾಗೂ ವಾಸುದೇವ ಗೌಡ ಬಂಧಿತಾರಾಗಿದ್ದ ನಾಲ್ವರನ್ನು ಜಾಮೀನು ದೊರಕಿಸಿಕೊಟ್ಟು ಜೈಲಿನಿಂದ ಬಿಡುಗಡೆಗೊಳಿಸಿದ್ದಾರೆ.