ಮಲ್ಪೆಯಲ್ಲಿ ಕೆಜಿ ಮೀನಿಗೆ 9000 ! | ಒಂದೇ ಮೀನು 1.80 ಲಕ್ಷಕ್ಕೆ ಹರಾಜಾಗಿ ಮೀನುಗಾರರ ಜೇಬು ತುಂಬಿಸಿತು !!
ಉಡುಪಿ : ಕರಾವಳಿಯ ಮೀನುಗಾರರಿಗೆ ಅಪರೂಪದ ಗೋಳಿ ಮೀನು ಸಿಕ್ಕಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್ ಖುಲಾಯಿಸಿದೆ. ಒಂದೇ ಒಂದು ಮೀನು ಬರಾಬ್ಬರಿ 1.8 ಲಕ್ಷ ದುಡಿದು ಕೊಟ್ಟಿದೆ.
ಉಡುಪಿ ಜಿಲ್ಲೆಯ ಮಲ್ಪೆಯ ಮೀನುಗಾರ ಶಾನ್ ರಾಜ್ ಎಂಬವರಿಗೆ ಸೇರಿದ ಬೋಟಿನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮಾಮೂಲಿ. ಮೀನಿನ ನಿರೀಕ್ಷೆಯಲ್ಲಿ ಇದ್ದವರಿಗೆ ಅಪರೂಪದ ಗೋಳಿ ಮೀನು ದೊರೆತಿದೆ. ಒಂದೇ ಮೀನು 18 ಕೆಜಿ ತೂಗುತ್ತಿತ್ತು.
ಎಂದಿನಂತೆ ಮೀನುಗಳನ್ನುತಂದು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಈ ವೇಳೆಯಲ್ಲಿ ಮೀನುಗಾರರು ಆಶ್ವರ್ಯ ಚಕಿತರಾಗಿದ್ದಾರೆ. ಯಾಕೆಂದ್ರೆ ಮೀನುಗಾರರು ಹಿಡಿದು ತಂದಿದ್ದ ಗೋಳಿ ಮೀನು ಬರೋಬ್ಬರಿ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಮಾರಾಟವಾಗಿ ಮೀನುಗಾರರ ಜೇಬು ತುಂಬಿಸಿದೆ ಈ ಒಂದೇ ಮೀನು.
18 ಕೆಜಿ ತೂಕವಿದ್ದ ಗೋಳಿ ಮೀನು ಕೆ.ಜಿಗೆ ಬರೋಬ್ಬರಿ 9060 ರೂ. ನಂತೆ ಮಾರಾಟವಾಗಿದ್ದು, ಮಲ್ಪೆ ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಹರಾಜಾಗುತ್ತಿವೆ. ಇತ್ತೀಚೆಗೆ ಇದೇ ರೀತಿಯ ದೊಡ್ಡ ಮೀನೊಂದು ಮಂಗಳೂರಿನಲ್ಲಿ ಲಕ್ಷಾಂತರ ಗಳಿಸಿಕೊಟ್ಟಿತ್ತು.
ಈಗ ದೊರೆತ ಗೋಳಿ ಮೀನು ಅತ್ಯಂತ ಅಪರೂಪದ್ದಾಗಿದ್ದು, ಈ ಮೀನನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಕೆ ಮಾಡುತ್ತಾರೆ. ಮುಖ್ಯವಾಗಿ ಅಸ್ತಮಾ, ಮಧುಮೇಹ ಕಾಯಿಲೆಗಳಿಗೆ ಈ ಮೀನು ರಾಮಬಾಣ ಎನ್ನಲಾಗಿದೆ. ಹೀಗಾಗಿಯೇ ಮೀನು ಮಾರುಕಟ್ಟೆಯಲ್ಲಿ ಈ ಮೀನಿಗೆ ಭಾರೀ ಬೇಡಿಕೆ ಎನ್ನುತ್ತದೆ ಮೀನು ಮಾರುಕಟ್ಟೆ.