ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಕೊಯಿಲದಲ್ಲಿ ಅಕ್ರಮ ಕೋಳಿ ಅಂಕ?.

ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನೀಡೇಲು ಎಂಬಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿದ್ದು, ಪ್ರಭಾವಿ ರಾಜಕಾರಣಿಗಳು ಉನ್ನತ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಒಂದು ದಿನದಲ್ಲಿ ನಿಂತು ಹೋಗಿದ್ದ ಕೋಳಿ ಅಂಕವನ್ನು ಮತ್ತೆ ಮುಂದುವರಿಸಲು ಸಕಲ ಸಿದ್ದತೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಇದೆ.
ನೀಡೇಲು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ದೈವದ ನೇಮೊತ್ಸವ ಪ್ರಯುಕ್ತ ಮಂಗಳವಾರ ಹಾಗೂ ಬುಧವಾರ ಕೋಳಿ ಅಂಕ ನಡೆಸಲು ನಿರ್ಧರಿಸಲಾಗಿತ್ತು.

 


ಇದಕ್ಕೆ ಉನ್ನತ ಮಟ್ಡದ ಅಧಿಕಾರಿಗಳ ಶಿಫಾರಸ್ಸನ್ನು ಪಡೆಯಲಾಗಿತ್ತು ಎಂದು ಹೇಳಲಾಗಿದೆ. ಅದರಂತೆ ಮಂಗಳವಾರ ಅದ್ಧೂರಿ ಕೋಳಿ ಅಂಕ ನಡೆದಿತ್ತು.ಆದರೆ ಬುಧವಾರ ನಡೆಯುವ ಕೋಳಿ ಅಂಕಕ್ಕೆ ಕಡಬ ಪೋಲೀಸರು ಅವಕಾಶ ನೀಡಿರಲಿಲ್ಲ. ಇದರಿಂದ ರೋಸಿ ಹೋದ ಅಕ್ರಮ ಕೋಳಿ ಅಂಕದ ಸಂಘಟಕರು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಮಂಗಳವಾರ ತಡ ರಾತ್ರಿ ತನಕ ಕಾದು ಕೋಳಿ ಅಂಕ ನಡೆಸಲು ಕಡಬ ಪೋಲೀಸರು ಅನುಮತಿ ನೀಡಲು ಒತ್ತಡ ಹೇರುವಂತೆ ಸಚಿವರಿಗೆ ದುಂಬಾಲು ಬಿದ್ದಿದ್ದರು.

ಆದರೆ ಸಚಿವರು ಅದಕ್ಕೆ ಸೊಪ್ಪು ಹಾಕದೆ ಇರುವ ಕಾರಣ ಬುಧವಾರ ನಡೆಸಬೇಕಾಗಿದ್ದ ಕೋಳಿ ಅಂಕಕ್ಕೆ ಬ್ರೇಕ್ ಬಿದ್ದಿತ್ತು. ಪ್ರಯತ್ನ ಬಿಡದ ಕೊಳಿ ಅಂಕ ಸಂಘಟಕರು, ಪ್ರಭಾವಿ ರಾಜಕೀಯ ವೈಕ್ತಿಯೊಬ್ಬರ ಮುಖಾಂತರ ಸಚಿವ ಕೋಟಾ ಅವರ ಬಳಿ ತೆರಳಿ ಗುರುವಾರವಾದರೂ ಕೋಳಿ ಅಂಕ ನಡೆಸಲು ಕಡಬ ಪೋಲೀಸರು ಅನುಮತಿ ನೀಡಲು ಜಿಲ್ಲಾ ಪೋಲೀಸ್ ವರಿಷ್ಠರಿಗೆ ಆದೇಶ ನೀಡಬೇಕೆಂದು ಒತ್ತಡ ಹೇರಲಾಗಿದೆ ಎನ್ನುವ ಮಾಹಿತಿ ಈಗ ಹರಿದಾಡುತ್ತಿದೆ.

ಇದು ಸತ್ಯವೇ ಆದಲ್ಲಿ ಗುರುವಾರ ನಿಡೇಲು ಎಂಬಲ್ಲಿ ಮತ್ತೆ ಅಕ್ರಮ ಕೋಳಿ ಅಂಕ ವಿಜ್ರಂಭಿಸಲಿದೆ ಎನ್ನು‌ವ ಆತಂತ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ ಸಚಿವರು ಇದಕ್ಕೆಲ್ಲಾ ಅವಕಾಶ ಕಲ್ಪಿಸುತ್ತಾರಾ ಎನ್ನುವ ಸಂಶಯ ವ್ಯಕ್ತವಾಗಿದೆ.

Leave A Reply

Your email address will not be published.