ಉಪ್ಪಿನಂಗಡಿ:ನಾಟಿವೈದ್ಯನ ಜೀವದೊಂದಿಗೆ ಪ್ರಾಣಬಿಟ್ಟ ಜೀವದೊಡತಿ!! ಗಂಡ ಮೃತಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಹೆಂಡತಿಯೂ ಸಾವು

Share the Article

ಆದರ್ಶ ದಂಪತಿಗಳಿಬ್ಬರು ಜೊತೆಯಾಗಿ ಪ್ರಾಣಬಿಟ್ಟ ಘಟನೆ ಉಪ್ಪಿನಂಗಡಿಯ ಸಮೀಪದ ಪದ್ಮುಂಜ ಎಂಬಲ್ಲಿಂದ ವರದಿಯಾಗಿದೆ.

ಉಪ್ಪಿನಂಗಡಿಯ ಸಹಿತ ಹಲವೆಡೆ ತನ್ನ ನಾಟಿ ಮದ್ದಿನಿಂದ ‘ನಾಟಿವೈದ್ಯ’ ಎಂದೇ ಚಿರಪರಿಚಿತರಾಗಿದ್ದ ವೆಂಕಪ್ಪ ಪಂಡಿತ ನವೆಂಬರ್ 19 ರ ರಾತ್ರಿ ನಿಧನಹೊಂದಿದರೆ, ಮರುದಿನ ಅವರ ಹೆಂಡತಿಯು ಸರಸ್ವತಿ ಕೂಡಾ ಮರಣಹೊಂದಿದ್ದಾರೆ.

ನಾಟಿವೈದ್ಯರಾಗಿ ಪ್ರಸಿದ್ಧಿ ಪಡೆದಿದ್ದ ವೆಂಕಪ್ಪ ಪಂಡಿತ ಹಲವಾರು ಖಾಯಿಲೆಗಳಿಗೆ ರಾತ್ರಿ ಹಗಲೆನ್ನದೆ ಮದ್ದು ನೀಡುತ್ತಿದ್ದರು. ಮೃತರು ಇಬ್ಬರು ಪುತ್ರರನ್ನು, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave A Reply