ಮೆಲ್ಕಾರ್:ಕುಡಿದು ಕಿಕ್ಕೇರಿದ ಪುಂಡರ ತಂಡಗಳ ನಡುವೆ ಬಾರ್ ಮುಂಭಾಗ ಹೊಡೆದಾಟ!| ಬಾಟಲಿಯಿಂದ ಹಲ್ಲೆ ನಡೆಸುವ ದೃಶ್ಯ ವೈರಲ್

Share the Article

ಬಂಟ್ವಾಳ : ಇಲ್ಲಿನ ಮೆಲ್ಕಾರ್ ಎಂಬಲ್ಲಿ ಬಾರ್ ಒಂದರ ಮುಂಭಾಗ ಕುಡಿದು ಕಿಕ್ಕೇರಿದ್ದ ಪುಂಡರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಹೊಡೆದಾಡಿಕೊಳ್ಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೆಲ್ಕಾರ್ ರಾಜೇಶ್ ಬಾರ್ ಮುಂಭಾಗ ಪುಂಡರ ತಂಡಗಳ ನಡುವೆ ಗಲಾಟೆ ನಡೆದಿದ್ದು,
ಕುಡಿದ ಮತ್ತಿನಲ್ಲಿ ಎರಡು ತಂಡಗಳು ಪರಸ್ಪರ
ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೋಲು ಹಾಗೂ ಬಾಟಲಿಗಳಿಂದ ಪರಸ್ಪರ ಹಲ್ಲೆ
ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ
ವೈರಲ್ ಆಗಿದ್ದು, ಜಗಳಕ್ಕೆ ನಿಖರ ಕಾರಣ ತಿಳಿದುಬಂದಿದೆ.

Leave A Reply