ಮಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಡಿದೆ ಆತಂಕ!!ರಾತ್ರಿ ಹೊತ್ತು ರನ್ ವೇ ಯಲ್ಲಿ ಕಾಣಿಸುತ್ತದೆಯಂತೆ ಕಾಡುಪ್ರಾಣಿ!!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿರತೆ ಸಹಿತ ಇತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಾಡುಪ್ರಾಣಿಗಳ ಹಾವಳಿಯ ಭೀತಿ ಹೆಚ್ಚಾಗುತ್ತಿರುವ ನಡುವೆ ಏರ್ಪೋರ್ಟ್ ಅಧಿಕಾರಿಗಳು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಸದ್ಯ ವಿಮಾನ ನಿಲ್ದಾಣದ ಸುತ್ತಲೂ ಬೋನ್ ಇರಿಸಲಾಗಿದೆ.
ಕಳೆದ ಕೆಲ ದಿನಗಳಿಂದ ರಾತ್ರಿ ಹೊತ್ತಿನಲ್ಲಿ ರನ್ ವೇ ಸುತ್ತಮುತ್ತ ಮೂರರಿಂದ ನಾಲ್ಕು ಚಿರತೆಗಳು ಕಂಡುಬಂದಿದ್ದು, ಅದಲ್ಲದೇ ನವಿಲು, ನರಿ, ಹಕ್ಕಿಗಳ ಕಾಟವೂ ಹೆಚ್ಚಾಗತೊಡಗಿದ್ದರಿಂದ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಸದ್ಯ ಅರಣ್ಯ ಇಲಾಖೆಯು ಕಾರ್ಯಾಚರಣೆ ಕೈಗೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.